ಸಿಎಂಗೆ ಬಿಜೆಪಿ ಜೊತೆ ಮೈತ್ರಿ ಮಾಡ್ಕೊಳ್ಳೋ ಆಸೆ ಇದೆ: ಈಶ್ವರಪ್ಪ

0
233

ಶಿವಮೊಗ್ಗ: ಕುಮಾರಸ್ವಾಮಿ ಅವರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳೋ ಆಸೆ ಇದೆ. ಕಾಂಗ್ರೆಸ್​ನಿಂದ ಯಾವತ್ತು ಋಣ ಮುಕ್ತರಾಗುತ್ತೇವೆ ಗೊತ್ತಿಲ್ಲ ಅಂತ ಸ್ವತಃ ಸಿಎಂ ಕುಮಾರಸ್ವಾಮಿಯವರೇ ನನ್ನ ಬಳಿ ಹೇಳಿದ್ದಾರೆ ಎಂದು ಬಿಜೆಪಿ ಮುಖಂಡ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ಮೂಲಕ ಸಿಎಂ ಎಚ್​. ಡಿ ಕುಮಾರಸ್ವಾಮಿ ಅವರ ಬಗ್ಗೆ ಈಶ್ವರಪ್ಪ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಶಿವಮೊಗ್ಗದಲ್ಲಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಈಶ್ವರಪ್ಪ, “ನೇರವಾಗಿ ಕುಮಾರಸ್ವಾಮಿಯವರೇ ನನ್ನ ಬಳಿ ಈ ಮಾತನ್ನು ಹೇಳಿದ್ದಾರೆ. ನಾಳೆ ಈ ಕುರಿತು ನೀವು ಅವರ ಬಳಿ ಕೇಳಿದಾಗ,  ನಾನು ಈ ರೀತಿ ಮಾತನಾಡಿಲ್ಲ ಎಂದು ಉತ್ತರ ಕೊಡಬಹುದು. ಅದರೆ ಮನಸಾಕ್ಷಿ ಎಂಬುದು ಒಂದು ಇದೆಯಲ್ಲಾ ಅಂತ ಈಶ್ವರಪ್ಪ ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್ ಜೊತೆಗೆ ಯಾಕಾದರೂ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಅನೇಕ ಜೆಡಿಎಸ್ ಶಾಸಕರು ಮತ್ತು ಮಂತ್ರಿಗಳು ಹೇಳುತ್ತಿದ್ದಾರೆ. ನನ್ನ ಬಳಿಯೇ ತಲೆ ಚಚ್ಚಿಕೊಂಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಚೆನ್ನಾಗಿತ್ತು ಅಂತ ಹಲವರು ಹೇಳಿಕೊಂಡಿದ್ದಾರೆ. ಇನ್ನು ಮುಂದುವರೆದು ಸಚಿವ ಪುಟ್ಟರಾಜು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೇ ಚೆನ್ನಾಗಿತ್ತು ಎಂಬ ಹೇಳಿಕೆ ಕೊಟ್ಟಿದ್ದಾರೆ” ಎನ್ನುವ ಮೂಲಕ ಈಶ್ವರಪ್ಪ  ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here