ರೇವಣ್ಣ ಸತ್ತಿದ್ರೆ ಮರುದಿನವೇ ಭವಾನಿ ಅವ್ರು ಕ್ಯಾಂಡಿಡೇಟ್ ಆಗ್ತಿದ್ರು: ಈಶ್ವರಪ್ಪ

0
262

ಬಾಗಲಕೋಟೆ: ಒಂದು ವೇಳೆ ರೇವಣ್ಣ ಸತ್ತಿದ್ರೆ ಮರುದಿನವೇ ಭವಾನಿ ರೇವಣ್ಣ ಅವ್ರು ಕ್ಯಾಂಡಿಡೇಟ್ ಆಗ್ತಿದ್ರು ಎಂದು ಬಿಜೆಪಿ ಮುಖಂಡ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ ಮಂಡ್ಯದ ಯುವಕ ಮಾಧ್ಯಮದಲ್ಲಿ ಹೇಳುತ್ತಿದ್ದ ಎಂದು ಈ ಬಗ್ಗೆ ಉಲ್ಲೇಖಿಸಿದ್ದಾರೆ.

ರೇವಣ್ಣ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, “ಅವ್ರು ತಕ್ಷಣ ಕ್ಷಮೆ ಕೇಳದಿದ್ರೆ ಜೆಡಿಎಸ್ ಪಕ್ಷಕ್ಕೆ ಮಹಿಳಾ ಸಿಂಬಲ್ ಹಾಕೋ ಅರ್ಹತೆಯಿಲ್ಲ. ದೇವೇಗೌಡ್ರು ೨೮ ಮಕ್ಕಳು ಹುಟ್ಟಲಿಲ್ಲವಲ್ಲ ಎಂದು ಯೋಚಿಸ್ತಿರಬಹುದು? ೧೪ ಮಕ್ಕಳಿದ್ರೂ ೧೪ ಸೊಸೆಯಂದಿರು ಸೇರಿ ೨೮ ಕ್ಷೇತ್ರಕ್ಕೆ ಅಭ್ಯರ್ಥಿಗಳು ಸಿಗ್ತಿದ್ರು” ಎಂದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

“ಸುಮಲತ ಕಣ್ಣೀರು ಹಾಕ್ತಿರೋದಕ್ಕೆ ಇಡಿ ರಾಜ್ಯವೇ ಮರುಗುತ್ತಿದೆ. ಆದ್ರೇ ದೇವೇಗೌಡ, ಕುಮಾರಸ್ವಾಮಿ, ರೇವಣ್ಣನವರ ಕಣ್ಣೀರು ನಾಟಕೀಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ  ನಾನು ಅವರ ಕುಟುಂಬದ ಬಗ್ಗೆ ಮಾತನಾಡೋದಿಲ್ಲ. ದೇವೆಗೌಡ್ರ ಇಡಿ ಫ್ಯಾಮಿಲಿನೇ ರಾಜಕೀಯ ಮಾಡುತ್ತಿದೆ. ಕೆಲವರ ಹಣೆಯಲ್ಲಿ ಬರೆದಿರುತ್ತೆ. 38 ಸೀಟು ಬಂದ್ರೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗೋದು. ಆದ್ರೆ ಇನ್ನು ಮುಂದೆ ಇದು ಸಾಧ್ಯವಿಲ್ಲ” ಎಂದು ಲೇವಡಿ ಮಾಡಿದ್ದಾರೆ.

ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿ, “ನಾನು ಅವರ ಕುಟುಂಬದ ಬಗ್ಗೆ ಮಾತನಾಡಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯರು, ಈಶ್ವರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಅಂತಾರೆ. ಆದ್ರೆ ನಾವು ಹಾಗಲ್ಲ. ದೇವೇಗೌಡ್ರು ಇಡೀ ಫ್ಯಾಮಲಿನೇ ರಾಜಕಾರಣ ಮಾಡುತ್ತಿದ್ದಾರೆ. ೩೮ ಸೀಟು ಬಂದ್ರೆ ತಾನೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗೋದು. ಆದ್ರೆ ಇನ್ನು ಮುಂದೆ ಇದು ಸಾಧ್ಯವಿಲ್ಲ” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here