ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ: ಈಶ್ವರಪ್ಪ

0
229

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಅಂತ ಬಿಜೆಪಿ ಶಾಸಕ ಕೆ. ಎಸ್ ಈಶ್ವರಪ್ಪ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕುಮಾರಸ್ವಾಮಿ ನಮ್ಮ ಸಿಎಂ ಅಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕೊಟ್ಟ ವಿಪ್ ಕಸದ ಬುಟ್ಟಿಗೆ ಎಸೆದಿದ್ದಾರೆ. ಕಾಂಗ್ರೆಸ್ ಪಕ್ಷದ ವಿಪ್​​ಗೆ ಬೆಲೆಯೇ ಇಲ್ಲ. 10ಕ್ಕೂ ಶಾಸಕರು ಕಲಾಪಕ್ಕೆ ಬಂದಿಲ್ಲ. ಅವರೇನು ಏನು ಕ್ರಮ ತೆಗೆದುಕೊಳ್ತಾರೆ? ಕ್ರಮ ತೆಗೆದುಕೊಳ್ತೇವೆ ಅಂದ್ರೂ ಶಾಸಕರು ಬರಲಿಲ್ಲ” ಅಂತ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here