ಬೆಂಗಳೂರು: ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ 578 ರನ್ ಬೃಹತ್ ಮೊತ್ತ ಗುಡ್ಡೆ ಹಾಕಿದ್ದ ಪ್ರವಾಸಿ ತಂಡ, ಭಾರತವನ್ನ 337 ರನ್ಗಳಿಗೆ ಆಲೌಟ್ ಮಾಡಿದೆ. 241 ರನ್ಗಳ ಬೃಹತ್ ಮುನ್ನಡೆ ಪಡೆದರೂ, ಭಾರತಕ್ಕೆ ಫಾಲೋ ಆನ್ ಹೇರದ ಇಂಗ್ಲೆಂಡ್ ಬ್ಯಾಟಿಂಗ್ ಮುಂದುವರೆಸಿದ್ದು, 71 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ನಿನ್ನೆ ಔಟಾಗದೇ ಉಳಿದಿದ್ದ ವಾಷಿಂಗ್ಟನ್ ಸುಂದರ್ ಏಕಾಂಗಿಯಾಗಿ ಹೋರಾಟ ನಡೆಸಿ, ಭಾರತವನ್ನ 300 ರನ್ಗಳ ಗಡಿ ದಾಟಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ, ದಿಟ್ಟ ಬ್ಯಾಟಿಂಗ್ ಮಾಡಿದ ಸುಂದರ್ ಕೊನೆಗೆ 85 ರನ್ಗಳಿಗೆ ಔಟಾಗದೇ ಉಳಿದರು.
241 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಅಶ್ವಿನ್ ಶಾಕ್ ನೀಡಿದರು. ಮೊದಲ ಓವರ್ನಲ್ಲಿ ರೋನಿ ಬರ್ನ್ಸ್, 11 ನೇ ಓವರ್ನಲ್ಲಿ ದೊಮಿನಿಕ್ ಸಿಬ್ಲಿಗೆ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ಬಂದ ಡೇನಿಯಲ್ ಲಾರೆನ್ಸ್ 18 ರನ್ಗಳಿಸಿ ಇಶಾಂತ್ ಶರ್ಮಾಗೆ ಮುನ್ನರನೇ ಬಲಿಯಾದರು. ಬೆನ್ ಸ್ಟೋಕ್ ಸಹ ಅಶ್ವಿನ್ ಎಸೆತದಲ್ಲಿ ಪಂತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಇಶಾಂತ್ ಶರ್ಮಾ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. 98 ನೇ ಟೆಸ್ಟ್ ಪಂದ್ಯದಲ್ಲಿ ಮುನ್ನುರು ವಿಕೆಟ್ ಪಡೆದವರ ಸಾಲಿಗೆ ಇಶಾಂತ್ ಸೇರ್ಪಡೆಯಾದರು. ಚೆನ್ನೈ ಟೆಸ್ಟ್ನಲ್ಲಿ ಇಂಗ್ಲೆಂಡ್ನ ಲಾರೆನ್ಸ್ ವಿಕೆಟ್ ಪಡೆಯುವ ಮೂಲಕ 300 ವಿಕೆಟ್ಗಳ ಪಡೆದವರ ಕ್ಲಬ್ ಸೇರಿದರು. ಭಾರತದ ಅನಿಲ್ ಕುಂಬ್ಳೆ, ಕಪಿಲ್ ದೇವ್, ಹರ್ಬಜನ್ ಸಿಂಗ್, ಅಶ್ವಿನ್, ಜಹೀರ್ ಖಾನ್ 300 ವಿಕೆಟ್ ಪಡೆದ ಭಾರತದ ಇತರೇ ಬೌಲರ್ಗಳು ಇದ್ದರು.