ನವದೆಹಲಿ : ಟೀಮ್ ಇಂಡಿಯಾದ ವೇಗದ ಬೌಲರ್ ಸೇರಿ 27 ಮಂದಿ ಕ್ರೀಡಾ ಸಾಧಕರಿಗೆ ಅರ್ಜುನ್ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಗೆ ಶಿಫಾರಸ್ಸುಗೊಂಡವರ ಪೈಕಿ ವ್ಹೈಟ್ ಲಿಫ್ಟರ್ ಸೈಕೋಮ್ ಮೀರಾಬಾಯಿ ಚಾನು ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಹೆಸರು ಕೈ ಬಿಡಲಾಗಿದೆ. ಸಾಕ್ಷಿ ಮಲಿಕ್ ಅವರು ಈ ಹಿಂದೆ ಸಾಕ್ಷಿ ಖೇಲ್ ರತ್ನಾ ಪ್ರಶಸ್ತಿಗೆ ಭಾಜರಾಗಿರುವುದರಿಂದ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಕ್ರೀಡಾ ಇಲಾಖೆ ತಿಳಿಸಿದೆ.
ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಇಶಾಂತ್ ಶರ್ಮಾ ( ಕ್ರಿಕೆಟ್)
- ದೀಪ್ತಿ ಶರ್ಮಾ ( ಕ್ರಿಕೆಟ್ )
- ಅತನು ದಾಸ್ (ಬಿಲ್ಲುಗಾರಿಕೆ)
- ದುತಿ ಚಂದ್ (ಅಥ್ಲೆಟಿಕ್ಸ್)
- ಸಾತ್ವಿಕ್ ಸೈರಾಜ್ ರಂಕಿರೆಡ್ಡಿ (ಬ್ಯಾಡ್ಮಿಂಟನ್)
- ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್)
- ವಿಶೇಶ್ ಭ್ರೀಗುವಾಂಶಿ (ಬಾಸ್ಕೆಟ್ಬಾಲ್)
- ಮನೀಶ್ ಕೌಶಿಕ್ (ಬಾಕ್ಸಿಂಗ್)
- ಲೊವ್ಲಿನಾ ಬೋರ್ಗೊಹೈನ್ (ಬಾಕ್ಸಿಂಗ್)
- ಸಾವಂತ್ ಅಜಯ್ ಅನಂತ್ (ಕುದುರೆ ಸವಾರಿ)
- ಸಂದೇಶ್ ಜಿಂಗನ್ (ಫುಟ್ಬಾಲ್)
- ಅದಿತಿ ಅಶೋಕ್ (ಗಾಲ್ಫ್)
- ಆಕಾಶ್ದೀಪ್ ಸಿಂಗ್ (ಹಾಕಿ)
- ದೀಪಿಕಾ (ಹಾಕಿ)
- ದೀಪಕ್ (ಕಬಡ್ಡಿ)
- ಕೇಲ್ ಸಾರಿಕಾ ಸುಧಾಕರ್ (ಖೋ ಖೋ)
- ದತ್ತ ಬಾಬನ್ ಭೋಕನಲ್ (ರೋಯಿಂಗ್)
- ಮನು ಭಾಕರ್ (ಶೂಟಿಂಗ್)
- ಸೌರಭ್ ಚೌಧರಿ (ಶೂಟಿಂಗ್)
- ಮಾಧುರಿಕಾ ಸುಹಾಸ್ ಪಟ್ಕರ್ (ಟೇಬಲ್ ಟೆನ್ನಿಸ್)
- ಡಿವಿಜ್ ಶರಣ್ (ಟೆನ್ನಿಸ್)
- ಶಿವ ಕೇಶವನ್ (ಚಳಿಗಾಲದ ಕ್ರೀಡೆ
- ದಿವ್ಯಾ ಕಕ್ರನ್ (ಕುಸ್ತಿ)
- ರಾಹುಲ್ ಅವೇರ್ (ಕುಸ್ತಿ)
- ಸುಯಾಶ್ ನಾರಾಯಣ್ ಜಾಧವ್ (ಪ್ಯಾರಾ-ಈಜು)
- ಸಂದೀಪ್ (ಪ್ಯಾರಾ-ಅಥ್ಲೆಟಿಕ್ಸ್)
- ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್)