Friday, October 7, 2022
Powertv Logo
Homeದೇಶಕೊರೋನಾ ಹರಡುವ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಐಅರ್​ಎಸ್ ಅಧಿಕಾರಿ

ಕೊರೋನಾ ಹರಡುವ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಐಅರ್​ಎಸ್ ಅಧಿಕಾರಿ

ನವದೆಹಲಿ: ಮಹಾಮಾರಿ ಕೊರೋನಾ ಹಾವಳಿ ಹೆಚ್ಚುತ್ತಿದ್ದು, ಅದಕ್ಕೆ ಅನೇಕ ಅಧಿಕಾರಿಗಳು ತುತ್ತಾಗುತ್ತಿದ್ದಾರೆ. ಹಾಗಾಗಿ ಕೊರೋನಾ ಹರಡುವ ಭಯಕ್ಕೆ ದೆಹಲಿಯಲ್ಲಿ ಐಆರ್​ಎಸ್ ಅಧಿಕಾರಿ ಶಿವರಾಜ್ ಸಿಂಗ್ ತನ್ನ ಕಾರಿನಲ್ಲಿ ಆ್ಯಸಿಡ್ ರೀತಿಯ ದ್ರವ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೆಹಲಿಯ ಆರ್​.ಕೆ ಪುರಂನಲ್ಲಿ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ 56 ವರ್ಷದ ಶಿವರಾಜ್ ಸಿಂಗ್ ಕೊರೋನಾ ಹರಡಿರುವ ಶಂಕೆಯಿಂದ ಕೊರೋನಾ ಟೆಸ್ಟ್ ಮಾಡಿಸಿದ್ದರು. ರಿಪೋರ್ಟ್​ನಲ್ಲಿ ನೆಗೆಟಿವ್ ಬಂದಿರುತ್ತದೆ. ಹಾಗಿದ್ದರೂ ಕೊರೋನಾ ಭಯದಿಂದ ಕುಟುಂಬಸ್ಥರಿಗೆ ಯಾವುದೇ ಸಮಸ್ಯೆಯಾಗಬಾರದೆಂದು ಮಾಡಿಕೊಂಡಿದ್ದು, ಡೆತ್​ನೋಟ್​ನಲ್ಲಿ ಅದನ್ನು ಬರೆದಿಟ್ಟಿದ್ದಾರೆ. ಸದ್ಯ ಪೊಲೀಸರು ಸಾವಿನ ಕುರಿತು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments