Saturday, October 1, 2022
Powertv Logo
Homeವಿದೇಶಕ್ರಿಕೆಟ್​ಗೆ ಗುಡ್​ಬೈ ಹೇಳಿದ 2007ರ ಟಿ20 ವರ್ಲ್ಡ್​ಕಪ್ ಹೀರೋ ಇರ್ಫಾನ್ ಪಠಾಣ್!

ಕ್ರಿಕೆಟ್​ಗೆ ಗುಡ್​ಬೈ ಹೇಳಿದ 2007ರ ಟಿ20 ವರ್ಲ್ಡ್​ಕಪ್ ಹೀರೋ ಇರ್ಫಾನ್ ಪಠಾಣ್!

ಟೀಮ್ ಇಂಡಿಯಾದ ಸ್ಟಾರ್​ ಆಲ್​ರೌಂಡರ್ ಇರ್ಫಾನ್ ಪಠಾಣ್ ದಿಢೀರ್ ಅಂತ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. 2003ರಲ್ಲಿ ತನ್ನ 19ನೇ ವಯಸ್ಸಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದ ಇರ್ಫಾನ್ ಪಠಾಣ್ 17 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹಾಡಿದ್ದಾರೆ.  
ಎಡಗೈ ವೇಗದ ಬೌಲರ್ ಆಗಿ ಟೀಮ್ ಇಂಡಿಯಾ ಕೂಡಿಕೊಂಡಿದ್ದ ಇರ್ಫಾನ್ ಮುಂದಿನ ದಿನಗಳಲ್ಲಿ ತಂಡದ ಪ್ರಮುಖ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ರು. 2006ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಮ್ಯಾಚ್​ನಲ್ಲಿ ಮೊದಲ ಓವರ್​ನಲ್ಲೇ ಸಲ್ಮಾನ್​ ಭಟ್, ಯೂನಿಸ್ ಖಾನ್ ಮತ್ತು ಮಹಮ್ಮದ್ ಯೂಸಫ್ ಅವರನ್ನು ಪೆವಿಲಿಯನ್​​ಗೆ ಕಳುಹಿಸಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ರು. ವಿಶ್ವ ಟೆಸ್ಟ್ ಕ್ರಿಕೆಟಲ್ಲಿ ಮೊದಲ ಓವರ್​ನಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಇಂದಿಗೂ ಇರ್ಫಾನ್ ಹೆಸರಲ್ಲೇ ಇದೆ.
2007ರ ವರ್ಲ್ಡ್​ಕಪ್ ಹೀರೋ : 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವರ್ಲ್ಡ್​​ಕಪ್​ನಲ್ಲಿ ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಇತಿಹಾಸ ಸೃಷ್ಠಿಸಿತ್ತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವಿನೊಂದಿಗೆ ಧೋನಿ ಪಡೆ ಚೊಚ್ಚಲ ಟಿ20 ವರ್ಲ್ಡ್​ಕಪ್​ ಅನ್ನು ಭಾರತಕ್ಕೆ ತಂದಿತ್ತು. ಫೈನಲ್​ನಲ್ಲಿ 4 ಓವರ್ ಬೌಲ್ ಮಾಡಿ ಕೇವಲ 16ರನ್ ಕೊಟ್ಟು 3 ವಿಕೆಟ್ ಕಿತ್ತಿದ್ದ ಇರ್ಫಾನ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ರು.
ಇರ್ಫಾನ್​​ ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳನ್ನಾಡಿ 100 ವಿಕೆಟ್​ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲಿ ಒಂದು ಶತಕ ಹಾಗೂ 6 ಅರ್ಧಶತಕದೊಂದಿಗೆ 1,105ರನ್ ಬಾರಿಸಿದ್ದಾರೆ. 120 ಒಡಿಐಗಳಲ್ಲಿ 173 ವಿಕೆಟ್ ಕಿತ್ತು, 5 ಅಮೂಲ್ಯ ಅರ್ಧಶತಕದೊಂದಿಗೆ 1,544ರನ್​ ಮಾಡಿದ್ದಾರೆ. 24 ಟಿ20 ಮ್ಯಾಚ್​ ಗಳಿಂದ 28 ವಿಕೆಟ್ ಪಡೆದು, 172ರನ್ ಗಳಿಸಿದ್ದಾರೆ.
ಇನ್ನು ದೇಸಿ ಕ್ರಿಕೆಟಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುತ್ತಿದ್ದ ಇರ್ಫಾನ್, 2018ರಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಸೇರಿದ್ದರು. ಐಪಿಎಲ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಸನ್​ ರೈಸರ್ಸ್​ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್​ ತಂಡವನ್ನು ಪ್ರತಿನಿಧಿಸಿದ್ದಾರೆ.
2008 ಏಪ್ರಿಲ್ 5ರಂದು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಬಳಿಕ ಇರ್ಫಾನ್ ಟೆಸ್ಟ್ ಟೀಮ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. 2012 ಆಗಸ್ಟ್​ 4ರಂದು ಶ್ರೀಲಂಕಾ ವಿರುದ್ಧ ಆಡಿದ್ದ ಮ್ಯಾಚೇ ಇರ್ಫಾನ್ ಕೊನೆಯ ಏಕದಿನ ಪಂದ್ಯ! ಹಾಗೆಯೇ 2012 ಅಕ್ಟೋಬರ್ 2ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಮ್ಯಾಚ್​ ಬಳಿಕ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​​ನಿಂದ ವಿರಮಿಸಿದ್ದಾರೆ.

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments