ಬಣ್ಣದ ಲೋಕಕ್ಕೆ ಹರ್ಭಜನ್​​, ಇರ್ಫಾನ್​ ಪಠಾಣ್ !

0
96

ಟೀಮ್ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್​ ಬ್ಯಾಟು, ಬಾಲು ಬಿಟ್ಟು ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಭಜ್ಜಿ ಮತ್ತು ಪಠಾಣ್ ಸಿನಿ ಜರ್ನಿ ಆರಂಭಿಸಲು ಮುಂದಾಗಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಅಬ್ಬರಿಸಿದ್ದ ಈ ಇಬ್ಬರು ತಾರೆಯರು ಸಿನಿ ಜಗತ್ತಿನಲ್ಲಿ ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಕಾಲಿವುಡ್ ಅರ್ಥಾತ್ ತಮಿಳು ಚಿತ್ರರಂಗದ ಮೂಲಕ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಸಿನಿಯಾನ ಆರಂಭಿಸುತ್ತಿದ್ದಾರೆ. ಇಬ್ಬರೂ ಬೇರೆ ಬೇರೆ ಸಿನಿಮಾಗಳಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ.
ಕಾಲಿವುಡ್​ ಸೂಪರ್ ಸ್ಟಾರ್ ವಿಕ್ರಮ್ ಅಭಿನಯದ ‘ವಿಕ್ರಮ್ 58’ ಸಿನಿಮಾದಲ್ಲಿ ಇರ್ಫಾನ್ ಪಠಾಣ್ ಅಭಿನಯಿಸುತ್ತಿದ್ದಾರೆ. ಅಜಯ್ ಜ್ಞಾನಮುತ್ತು ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಎ.ಆರ್ ರೆಹಮಾನ್ ಸಂಗೀತವಿದೆ. ಪ್ರಿಯಾ ಭವಾನಿ ಚಿತ್ರದ ನಾಯಕಿ.
ಅದೇರೀತಿ ಭಜ್ಜಿ ಸಿಂಗ್ ಸಂತಾನಮ್ ಅವರ ‘ಡಿಕ್ಕಿಲೋನಾ’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಹೀಗೆ ಪಠಾಣ್ ಮತ್ತು ಭಜ್ಜಿ ಕಾಲಿವುಡ್​ಗೆ ಕಾಲಿಡಲು ರೆಡಿಯಾಗಿದ್ದಾರೆ.

LEAVE A REPLY

Please enter your comment!
Please enter your name here