Home ಕ್ರೀಡೆ P.Cricket ಪಾನಿಪುರಿ ಮಾರುತ್ತಿದ್ದ ಹುಡುಗನಿಗೆ ಐಪಿಎಲ್​ನಲ್ಲಿ ಬಂಪರ್ ಬೆಲೆ!

ಪಾನಿಪುರಿ ಮಾರುತ್ತಿದ್ದ ಹುಡುಗನಿಗೆ ಐಪಿಎಲ್​ನಲ್ಲಿ ಬಂಪರ್ ಬೆಲೆ!

ಆತ ಪ್ರತಿಭಾವಂತ ಕ್ರಿಕೆಟಿಗ… ಬದುಕು ಕಟ್ಟಿಕೊಂಡಿದ್ದು ಪಾನಿಪುರಿ ಮಾರಿ… ಪುಟ್ಟ ಗುಡಿಸಲಲ್ಲಿ ಉಳಿದುಕೊಂಡು ಕ್ರಿಕೆಟ್​ ಅಭ್ಯಾಸ ಮಾಡಿದ ಕನಸು ಕಂಗಳ ಹುಡುಗ… ಆತನ ಪ್ರಯತ್ನ, ಛಲ, ಹಠ ಇಂದು ಫಲಿಸಿದೆ. ಐಪಿಎಲ್​ನಲ್ಲಿ ಕೋಟಿ ಕೋಟಿ ಬೆಲೆಗೆ ಇವತ್ತು ಬಿಕರಿಯಾಗಿದ್ದಾರೆ..ಆ ಯುವ ಕ್ರಿಕೆಟಿಗ.
ಹೌದು..ಪ್ರತಿಭೆಗೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೆ ಸಿಗುತ್ತದೆ. ಪಟ್ಟ ಕಷ್ಟಕ್ಕೆ ಎಂದೂ ಸೋಲಿಲ್ಲ.. ಬಡತನ, ಅವಮಾನ, ಕಷ್ಟಕ್ಕೆ ಎದೆಯೊಡ್ಡಿ ನಿಲ್ಲುವವರನ್ನು ಕಂಡರೆ ಸೋಲೇ ಸೋತು ಬಿಡುತ್ತೆ ಅನ್ನೋದಕ್ಕೆ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಉದಾಹರಣೆಯಾಗುತ್ತಾರೆ.
ಇಂದು ನಡೆದ ಐಪಿಎಲ್ ಹರಾಜಿನಲ್ಲಿ ಯುವ ಬ್ಯಾಟ್ಸ್​ಮನ್ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ 2.4 ಕೋಟಿ ರೂಗಳಿಗೆ ಖರೀದಿಸಿತು. ಇವರ ಮೂಲ ಬೆಲೆ 20 ಲಕ್ಷವಿತ್ತು. ಆದರೆ, ಪ್ರಾಂಚೈಸಿಗಳು ಇವರ ಖರೀದಿಗೆ ತಾ ಮುಂದು – ನಾ ಮುಂದು ಅಂತ ಪೈಪೋಟಿ ನಡೆಸಿದ್ರು. ಅಂತಿಮವಾಗಿ ರಾಜಸ್ಥಾನ ಯಶಸ್ವಿ ಜೈಸ್ವಾಲ್​ ಅವರನ್ನು ತಮ್ಮ ತಂಡ ಕೂಡಿಸಿಕೊಂಡಿತು.
ಕ್ರಿಕೆಟ್ ಆಡ್ಬೇಕೆಂಬ ಮಹಾ ಕನಸಿನೊಂದಿಗೆ ಮುಂಬೈನ ಹಾಸ್ಟೆಲ್ಲೊಂದರಲ್ಲಿದ್ದ ಯಶಸ್ವಿ ಜೈಸ್ವಾಲ್  ಅದ್ಯಾವುದೋ ಕಾರಣಕ್ಕೆ ಹಾಸ್ಟೆಲ್​ನಿಂದ ಹೊರ ಹಾಕಲ್ಪಟ್ಟರು. ಆಗ ಮುಸ್ಲೀಂ ಯುನೈಟೆಡ್​ ಕ್ಲಬ್​ನ ಇಮ್ರಾನ್ ಅವರು ಜೈಸ್ವಾಲ್ ಕೈ ಹಿಡಿದ್ರು. ಮುಂಬೈನ ಕ್ರಿಕೆಟ್ ಜನ್ಮಭೂಮಿ ಆಝಾದ್ ಮೈದಾನದ ಪಕ್ಕದಲ್ಲಿ ವಾಸಕ್ಕೊಂದು ಗುಡಿಸಲು ಮಾಡಿಕೊಟ್ರು. ಹೊಟ್ಟೆ ಪಾಡಿಗಾಗಿ ಪಾನಿಪೂರಿ ಮಾರುತ್ತಾ…ತಳ್ಳುಗಾಡಿಯಲ್ಲಿ ಆಹಾರ ಪೊಟ್ಟಣಗಳನ್ನು ಮಾರಾಟ ಮಾಡುತ್ತಾ ಕ್ರಿಕೆಟ್ ಅಂಗಳದಲ್ಲಿ ಸದ್ದು ಮಾಡಿದ್ರು.
ಶಾಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಪ್ರತಿಷ್ಟಿತ ಹ್ಯಾರೀಸ್ ಶೀಲ್ಡ್​​​ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಅಜೇಯ 319ರನ್ ಮತ್ತು 99ರನ್​ಗಳಿಗೆ 13 ವಿಕೆಟ್ ಕಿತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡಲ್ಲೂ ತನ್ನ ಹೆಸ್ರು ಬರೆಸಿಕೊಂಡಿರೋ ಕ್ರಿಕೆಟಿಗ ಇವರು.
ದೇಶಿಯ ಟೂರ್ನಿಯಲ್ಲಿ 52 ಸೆಂಚುರಿ, 200 ವಿಕೆಟ್ ಪಡೆದಿದ್ದಾರೆ. ಅಂಡರ್ -19 ಏಷ್ಯಾಕಪ್​ನಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಡಬಲ್ ಸೆಂಚುರಿ ಬಾರಿಸಿ ಮಿಂಚಿರುವ ಇವರು ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ನಡೆಯಲಿರುವ 19 ವರ್ಷದೊಳಗಿನವರ ಐಸಿಸಿ ಒಡಿಐ ವರ್ಲ್ಡ್​ ಕಪ್​ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಐಪಿಎಲ್​ ಹರಾಜಿನಲ್ನಲಿ ಬಂಪರ್ ಬೆಲೆಗೆ ಸೇಲಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments