Home ಕ್ರೀಡೆ P.Cricket ಕೊನೆಗೂ ಫಿಕ್ಸ್​ ಆಯ್ತು ಐಪಿಎಲ್ ದಿನಾಂಕ ..! ಯಾವತ್ತಿಂದ ಶುರು ಕ್ರಿಕೆಟ್ ಹಬ್ಬ?

ಕೊನೆಗೂ ಫಿಕ್ಸ್​ ಆಯ್ತು ಐಪಿಎಲ್ ದಿನಾಂಕ ..! ಯಾವತ್ತಿಂದ ಶುರು ಕ್ರಿಕೆಟ್ ಹಬ್ಬ?

ಇಂಡಿಯನ್ ಪ್ರೀಮಿಯರ್ ಲೀಗ್ (IPl)  ದಿನಾಂಕ ಫಿಕ್ಸ್ ಆಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ 13ನೇ ಆವೃತ್ತಿಯ ಐಪಿಎಲ್ ನಡೆಯಲಿದೆ ಅಂತ  ತಿಳಿದುಬಂದಿದೆ.

ಹೌದು, ಕೊರೋನಾ ದೆಸೆಯಿಂದ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕೊರೋನಾ ಆತಂಕದಿಂದಾಗಿ ಈ ವರ್ಷ ಟಿ20 ವರ್ಲ್ಡ್​ಕಪ್​ ಅನ್ನು ನಡೆಸದಿರಲು ಐಸಿಸಿ ನಿರ್ಧರಿಸಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಬಿಸಿಸಿಐ ವರ್ಲ್ಡ್​ಕಪ್​ ನಿಗದಿಯಾಗಿದ್ದ ಟೈಮ್​ನಲ್ಲಿ ಐಪಿಎಲ್ ನಡೆಸೋ ಚಿಂತನೆ ಮಾಡಿತ್ತು.

ಇದೀಗ  ಹೆಚ್ಚುಕಮ್ಮಿ ಒಂದು ತಿಂಗಳ ಮೊದಲೇ ಟೂರ್ನಿ ನಡೆಯಲಿದೆ. ಸದ್ಯ ಸೆಪ್ಟೆಂಬರ್ 19ರಿಂದ ನವೆಂಬರ್​ 8ರವರೆಗೆ ಐಪಿಎಲ್ ನಡೆಯಲಿದೆ. ಈ ಬಗ್ಗೆ ಬಿಸಿಸಿಐ ಇದುವರೆಗೆ ಯಾವ್ದೇ ಅಧಿಕೃತ ಮಾಹಿತಿ ನೀಡಿಲ್ಲ. ಬಿಸಿಸಿಐ ಮೂಲಗಳು ಈ ದಿನಾಂಕವನ್ನು ತಿಳಿಸಿದ್ದು, ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್​ ಕೊಟ್ಟ ಬಳಿಕ ಬಿಸಿಸಿಐ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ಪ್ರತಿಷ್ಠಿತ ನ್ಯೂಸ್ ಏಜೆನ್ಸಿ ಪಿಟಿಐ ವರದಿ ಮಾಡಿದೆ.

ಇನ್ನು ಯುಇಎ ಸರ್ಕಾರ  ತಮ್ಮಲ್ಲಿ ಐಪಿಎಲ್ ನಡೆಸಲು ಅವಕಾಶ ನೀಡುವುದಾಗಿ ಹೇಳಿದೆ.  ಅಲ್ಲಿನ ಸೌಲಭ್ಯಗಳು ಮತ್ತು ಪರಿಸ್ಥಿತಿ ಬಗ್ಗೆ ಅವಲೋಕಿಸ್ತಿದ್ದೇವೆ. ವಾರದೊಳಗೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ಸೇರಿ ಮುಂದಿನ ಐಪಿಎಲ್ ಟೂರ್ನಿ ಬಗ್ಗೆ ಚರ್ಚೆ ನಡೆಸಲಿದೆ ಅಂತ ಈಗಾಗಲೇ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments