Thursday, September 29, 2022
Powertv Logo
Homeಈ ಕ್ಷಣಆ್ಯಪಲ್ ಐಫೋನ್ 14 ಸರಣಿಯ ಐಫೋನ್‌ಗಳು ಬಿಡುಗಡೆ

ಆ್ಯಪಲ್ ಐಫೋನ್ 14 ಸರಣಿಯ ಐಫೋನ್‌ಗಳು ಬಿಡುಗಡೆ

ನವದೆಹಲಿ: ಸ್ಮಾರ್ಟ್​ ಪೋನ್​ ಪ್ರೀಯರಿಗಾಗಿ ಆ್ಯಪಲ್ ಒಡೆತನದ ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ, ಐಫೋನ್ 14 ಮ್ಯಾಕ್ಸ್​ ನ್ನ ಬುಧವಾರ ಕ್ಯಾಲಿಪೋರ್ನಿಯಾದಲ್ಲಿ ಬಿಡುಗಡೆಗೊಳಿಸಲಾಯಿತು.

ಭಾರತದಲ್ಲಿ ಐಫೋನ್ 14ರ ಬೆಲೆ 63,700 ರೂ, ಐಫೋನ್ 14 ಪ್ಲಸ್ 71,600 ರೂ, ಐಫೋನ್ 14 ಪ್ರೊ 1,29,900 ರೂ, ಐಫೋನ್ 14 ಮ್ಯಾಕ್ಸ್​ 1,39,900 ರೂ ಬೆಲೆಯಿಂದ ಗ್ರಾಹಕರ ಖರೀದಿಗೆ ಸಿಗುತ್ತದೆ. ಸೆಪ್ಟೆಂಬರ್​ 9 ರಿಂದ ಆನ್​ಲೈನಲ್ಲಿ ಬುಕ್ಕಿಂಗ್ ಆರಂಭವಾಗಲಿದ್ದು, ಸೆಪ್ಟಂಬರ್​ 17ಕ್ಕೆ ಗ್ರಾಹಕರ ಕೈಗೆ ಸಿಗಲಿದೆ.

ಇನ್ನು ಐಫೋನ್ 14 ಡಿಸ್​ಪ್ಲೇ 6.1 ಇಂಚು, ಐಫೋನ್ 14 ಪ್ಲಸ್ 6.7 ಇಂಚು ಡಿಸ್​ಪ್ಲೇ ಹೊಂದಿದೆ. ಅಲ್ಲದೇ ಈ ಐಪೋನ್​ ಅತ್ಯಾಧುನಿಕ ಹೊಸ ವಿನ್ಯಾಸವನ್ನ ಈ ಐಫೋನ್​ ಒಳಗೊಂಡಿದೆ. ಈ ಹೊಸ ಐಪೋನ್​ ಮುಂಭಾಗದ ಕ್ಯಾಮೆರಾದಲ್ಲಿ ಅಪ್‌ಗ್ರೇಡ್‌ಗಳು ಹೊಸ ಫ್ಯೂಚರ್​  ನೊಂದಿಗೆ ಟ್ರೂಡೆಪ್ತ್ ಇದೆ. ಇನ್ನು ಅಲ್ಟ್ರಾ ವೈಡ್ ಕ್ಯಾಮೆರಾ ಒಳಗೊಂಡಿದ್ದು, ಸುಮಾರು 48 ಎಂಪಿ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಈ ಐಪೋನ್​ ಸರಣಿಯಲ್ಲಿ ಚಿತ್ರಿಸಬಹುದಾಗಿದೆ.

ಆದರೆ ಭಾರತದಲ್ಲಿ ಮಾರಾಟವಾಗುವ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಮಾದರಿಗಳು ಯುಎಸ್ ಮಾದರಿಗಳಿಗಿಂತ ಭಿನ್ನವಾಗಿ ಸಿಮ್ ಕಾರ್ಡ್ ಟ್ರೇನೊಂದಿಗೆ ಬರುತ್ತವೆ. ಐಫೋನ್ 14 ಯು 128 ಇಂಟರ್ನಲ್​ ಜಿಬಿ ಸಂಗ್ರಹಣೆ, ಐಫೋನ್ 14 ಪ್ಲಸ್ 256 ಜಿಬಿ   ಇಂಟರ್ನಲ್​ ಸಾಮಾರ್ಥ್ಯ ಇದ್ದು, ಈ ಹೊಸ ಐಫೋನ್‌ಗಳು 5G ಯನ್ನ ಒಳಗೊಂಡಿದೆ.

- Advertisment -

Most Popular

Recent Comments