Home ಕ್ರೀಡೆ P.Cricket ಸಚಿನ್​​ ಕ್ರಿಕೆಟಿಂದ ಅಂತರ ಕಳೆದುಕೊಳ್ಳೋದು ಸರಿಯಲ್ಲ : ಇಂಜಮಾಮ್​ ಉಲ್​​ ಹಕ್

ಸಚಿನ್​​ ಕ್ರಿಕೆಟಿಂದ ಅಂತರ ಕಳೆದುಕೊಳ್ಳೋದು ಸರಿಯಲ್ಲ : ಇಂಜಮಾಮ್​ ಉಲ್​​ ಹಕ್

ಕ್ರಿಕೆಟ್ ಜಗತ್ತನ್ನು ಅನಭಿಷಕ್ತ ದೊರೆಯಂತೆ ಆಳಿದ ಸಚಿನ್ ತೆಂಡೂಲ್ಕರ್ ನಿವೃತ್ತಿ ಬಳಿಕ ಕ್ರಿಕೆಟಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಇಂಜಮಾಮ್ ಉಲ್ ಹಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಚಿನ್ ಏಕದಿನ ಕ್ರಿಕೆಟಲ್ಲಿ ದ್ವಿಶತಕ ಸಿಡಿಸಿ ಫೆ.24ಕ್ಕೆ 10 ವರ್ಷ ಆದ ಹಿನ್ನೆಲೆಯಲ್ಲಿ ಮಾತನಾಡಿದ ಉಲ್​ ಹಕ್, “ತೆಂಡೂಲ್ಕರ್ ಹೆಚ್ಚು ಕಮ್ಮಿ 2 ದಶಕಗಳ ಕಾಲ ಕ್ರಿಕೆಟ್ ಆಡಿದವ್ರು. ಅಂಥವರು ನಿವೃತ್ತಿ ಪಡೆದ ಕೂಡಲೇ ಕ್ರಿಕೆಟಿಂದ ಹೀಗೆ ಅಂತರ ಕಾಯ್ದುಕೊಳ್ಳೋದು ಸರಿಯಲ್ಲ. ಅವರ ಬ್ಯಾಟಿಂಗ್ ವೈಖರಿ ಅನುಭವವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು. ಅವರ ಅನುಭವ ಮುಂದಿನ ಬ್ಯಾಟ್ಸ್​ಮನ್​ಗಳಿಗೆ ಅಗತ್ಯ. ಸಚಿನ್ ತಮ್ಮ ಅನುಭವವನ್ನು ಹೊಸಬರಿಗೆ ಧಾರೆ ಎರೆಯಬೇಕು” ಅಂದಿದ್ದಾರೆ.
ಸಚಿನ್ ಅಂತಹ ಆಟಗಾರನನ್ನು ನಾನೆಂದೂ ನೋಡೇ ಇಲ್ಲ. ಅವರು ಹುಟ್ಟಿದ್ದೇ ಕ್ರಿಕೆಟಿಗಾಗಿ. ಕ್ರಿಕೆಟ್ ಮತ್ತು ಸಚಿನ್ ನಡುವೆ ಅವಿನಾಭಾವ ಸಂಬಂಧವಿತ್ತು. ಅತ್ಯಂತ ಚಿಕ್ಕ ವಯಸ್ಸಲ್ಲಿ ಅಪಾಯಕಾರಿ ಬೌಲರ್​ಗಳನ್ನು ಎದುರಿಸಿ ಯಶಸ್ವಿಯಾದ್ರು. 16, 17ನೇ ವಯಸ್ಸಲ್ಲಿ ವಕಾರ್ ಯೂನಿಸ್, ವಾಸಿಂ ಅಕ್ರಂರಂಥಾ ಬೌಲರ್​ಗಳನ್ನು ದಂಡಿಸಿದ್ರು. ಅಂಥಾ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ ಅಂತ ಇಂಜಮಾನ್ ಸಚಿನ್ ಅವರನ್ನು ಹಾಡಿಹೊಗಳಿದ್ದಾರೆ.

ಸಚಿನ್ ದಾಖಲೆಗಳ ಬಗ್ಗೆ ಮಾತನಾಡಿ, “ಒಂದು ಕಾಲದಲ್ಲಿ ಒಬ್ಬ ಕ್ರಿಕೆಟಿಗ ತನ್ನ ವೃತ್ತಿ ಜೀವನದಲ್ಲಿ ಅಬ್ಬಬ್ಬಾ ಅಂದ್ರೆ 8 ರಿಂದ 8.5 ಸಾವಿರ ರನ್ ಗಳಿಸಬಲ್ಲವರಾಗಿದ್ರು. ಸುನೀಲ್ ಗವಸ್ಕಾರ್ 10 ಸಾವಿರ ರನ್ ಬಾರಿಸಿದಾಗ ಇದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಅನ್ಕೊಂಡಿದ್ವಿ. ಆದ್ರೆ. ಸಚಿನ್ ಆ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ್ರು” ಅಂತ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕೊನೆಯ ಪರೀಕ್ಷೆಯಲ್ಲಿ 515 ವಿದ್ಯಾರ್ಥಿಗಳು ಗೈರು..!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕೊನೆಯ ದಿನವಾದ ಇಂದು ಒಟ್ಟು 515 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯಲ್ಲಿ 13061 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿತರಾಗಿದ್ದು ಅದರಲ್ಲಿ 12546...

ಮೊಬೈಲ್ ಸುಲಿಗೆ ಜೊತೆಗೆ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ.

ಶಿವಮೊಗ್ಗ : ಮೊಬೈಲ್ ಸುಲಿಗೆ ಮತ್ತು 3 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ತಪ್ಪಿಸಿಕೊಂಡು, ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳಾದ 19 ವರ್ಷದ ಪ್ರಶಾಂತ್ ಮತ್ತು 18...

ಮಲೆನಾಡಿನಲ್ಲಿ ಮಳೆಯ ಆರ್ಭಟ..!

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.  ಬೆಳಗ್ಗೆಯಿಂದಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲೆ ಸಾಧಾರಣ ಮಳೆ ಕೂಡ ಸುರಿಯುತ್ತಿತ್ತು. ಆದರೆ, ಸಂಜೆ ವೇಳೆಗೆ...

ಮುಂಜರಾಬಾದ್ ಕೋಟೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ: ಸಚಿವ ಸಿ.ಟಿ. ರವಿ

ಹಾಸನ : ಸಕಲೇಶಪುರ ತಾಲ್ಲೂಕಿನಲ್ಲಿರುವ ಮುಂಜರಾಬಾದ್ ಕೋಟೆಯ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ಕೇಂದ್ರ ಪುರಾತತ್ವದ ಅನುಮತಿ ಪಡೆದು 3 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ...