ಏರ್​ ಶೋ ಅಗ್ನಿ ಅವಘಡ: 67 ಕಾರು ಮಾಲೀಕರಿಗೆ ಸಿಕ್ತು ಇನ್ಶೂರೆನ್ಸ್ ಹಣ ..!

0
211

ಬೆಂಗಳೂರು: ಯಲಹಂಕದಲ್ಲಿ ಏರ್ ಶೋ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಾರುಗಳು ಸುಟ್ಟುಹೋಗಿದ್ದು, 67 ಕಾರು ಮಾಲೀಕರಿಗೆ ಇನ್ಶೂರೆನ್ಸ್​ ಹಣ ಲಭಿಸಿದೆ. ಇಂಜಿನ್ ಚಾಸಿ ನಂಬರ್ ಆಧಾರದ ಮೇಲೆ ಆರ್.ಟಿ.ಒ ಅಧಿಕಾರಿಗಳ ಸಹಾಯದೊಂದಿಗೆ ಕಾರು ಮಾಲೀಕರನ್ನು ಗುರುತಿಸಲಾಗಿದೆ. 6 ಕಾರುಗಳ ಮಾಲೀಕರು ಸಂಪರ್ಕಕ್ಕೆ ಲಭ್ಯವಾಗಿಲ್ಲ. 6 ಕಾರುಗಳಿಗೆ ಸಂಬಂಧಿಸಿ ಯಾವ ಮಾಲೀಕರು ದೂರು ನೀಡಿಲ್ಲ. ಈ ಆರು ಕಾರು ಮಾಲೀಕರು ಯಾವುದೇ ದಾಖಲೆಯನ್ನೂ ಕೂಡ ಕೊಟ್ಟಿಲ್ಲ.

ಇನ್ಶೂರೆನ್ಸ್ ಲ್ಯಾಪ್ಸ್ ಆಗಿರಬಹುದು ಎಂಬ ಕಾರಣಕ್ಕೆ ಕಾರಿನ ಮಾಲೀಕರು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರಾ..? ಕಾನೂನು ಹೋರಾಟಕ್ಕೆ ಅಂಜಿ ಮುಂದೆ ಬರದೇ ಇರಬಹುದು ಎಂಬ ಸಂದೇಹ ಮೂಡಿದೆ. ಆರ್​ಟಿಒ ದಾಖಲೆ ಆಧಾರದ ಮೇಲೆ ಮಾಲೀಕರನ್ನು ಪತ್ತೆ ಮಾಡಲು ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.

ಕಳೆದ ತಿಂಗಳು ಫೆಬ್ರವರಿ 20 ರಿಂದ 24ರ ವರೆಗೂ ಏರ್ ಶೋ ನಡೆದಿತ್ತು. ಅಗ್ನಿಅವಘಡದಲ್ಲಿ 280 ಕಾರ್​​ಗಳು ಸುಟ್ಟು ಕರಕಲಾಗಿದ್ದವು. ಪೊಲೀಸ್ ಠಾಣೆಯಲ್ಲಿ 277ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಗೇಟ್ ನಂಬರ್ 5 ರಲ್ಲಿ ಬೆಂಕಿ ಕಾಣಿಸಿಕೊಂಡು ಕಾರುಗಳು ಸುಟ್ಟು ಹೋಗಿದ್ದವು.

LEAVE A REPLY

Please enter your comment!
Please enter your name here