ಪ್ರಿಯಾಂಕಾ ಚೋಪ್ರಾರ Instagram​​ ಪೋಸ್ಟ್​​ ಇಷ್ಟೊಂದು ದುಬಾರಿನಾ?

0
240

ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್​​ನಲ್ಲೂ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ವಯಸ್ಸಿನಲ್ಲಿ ತನಗಿಂತ 10ವರ್ಷ ಚಿಕ್ಕವನನ್ನು ಮದ್ವೆಯಾಗಿ ಸುದ್ದಿಯಾಗಿದ್ದರು, ಅಷ್ಟೇ ಅಲ್ಲದೆ ಅಮೆರಿಕಾದ ಮೆಟ್​ ಗಾಲಾ ಸಂಭ್ರಮದಲ್ಲಿ ಗುಂಗುರು ಕೂದಲು, ಸಿಲ್ವರ್​ ಬಣ್ಣದ ಗೌನಿನಲ್ಲಿ ಗುರುತೇ ಸಿಗದಂತೆ ಕಾಣಿಸಿಕೊಂಡಿದ್ದರು. ಅವರ ಆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಮತ್ತೊಮ್ಮೆ ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಸದ್ದು ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್​ನಲ್ಲಿ 43 ಮಿಲಿಯನ್ ಫಾಲೋವರ್ಸ್​ ಹೊಂದಿರುವ ಪ್ರಿಯಾಂಕ ಚೋಪ್ರಾ ಒಂದು ಪೋಸ್ಟ್ ಅನ್ನು ತಮ್ಮ ಅಕೌಂಟ್​​ನಲ್ಲಿ ಹಾಕಲು 2,71,000 ಡಾಲರ್​​, ಅಂದ್ರೆ 1.50ಕೋಟಿ ರೂನಷ್ಟು ಹಣ ಪಡೀತಾರಂತೆ..!
2019 ರ ವರದಿಯ ಪ್ರಕಾರ ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೇರೆ ಬೇರೆ ಬ್ರಾಂಡ್​​ಗಳ ಉತ್ಪನ್ನಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಪ್ರಮೋಟ್ ಮಾಡುವ ಮೂಲಕವೂ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here