Home ಕ್ರೀಡೆ P.Cricket ವಿಜಯ್ ಶಂಕರ್ ಔಟ್, ಕನ್ನಡಿಗ ಮಯಾಂಕ್ ಅಗರವಾಲ್​ಗೆ ಚಾನ್ಸ್..!

ವಿಜಯ್ ಶಂಕರ್ ಔಟ್, ಕನ್ನಡಿಗ ಮಯಾಂಕ್ ಅಗರವಾಲ್​ಗೆ ಚಾನ್ಸ್..!

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವರ್ಲ್ಡ್​​ಕಪ್​ನಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡ್ತಾ ಇದೆ. ನಿನ್ನೆ ಇಂಗ್ಲೆಂಡ್ ವಿರುದ್ಧ ಸೋತಿದ್ದು ಬಿಟ್ಟರೆ ಉಳಿದೆಲ್ಲಾ ಮ್ಯಾಚ್​ಗಳಲ್ಲೂ ಭಾರತ ಅತ್ಯುತ್ತಮ ಆಟ ಪ್ರದರ್ಶಿಸಿದೆ.
3ನೇ ವಿಶ್ವಕಪ್​ ಅನ್ನು ಭಾರತಕ್ಕೆ ತರಲು ಕೊಹ್ಲಿ ಬಾಯ್ಸ್ ರೆಡಿಯಾಗಿದ್ದಾರೆ. ಆದರೆ, ಗಾಯದ ಸಮಸ್ಯೆ ಮಾತ್ರ ವಿರಾಟ್​ ಪಡೆಗೆ ಇನ್ನಿಲ್ಲದಂತೆ ಕಾಡ್ತಾ ಇದೆ. ಟೂರ್ನಿಯ ಆರಂಭದಲ್ಲೇ ಓಪನರ್ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಔಟಾದ್ರು. ಆಸೀಸ್ ವಿರುದ್ಧ ಮಿಂಚಿದ್ದ ಧವನ್​ ಉಳಿದ ಮ್ಯಾಚ್​ಗಳಿಗೆ ಲಭ್ಯವಾಗಿಲ್ಲ. ಅವರ ಬದಲು ರಿಷಬ್ ಪಂತ್ ಟೀಮ್ ಇಂಡಿಯಾವನ್ನು ಸೇರಿಕೊಂಡ್ರು. 4ನೇ ಕ್ರಮಾಂಕದಲ್ಲಿದ್ದ ಕನ್ನಡಿಗ ಕೆ.ಎಲ್ ರಾಹುಲ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸ್ತಾ ಇದ್ದಾರೆ. ಹೀಗಾಗಿ 4ನೇ ಕ್ರಮಾಂಕಕ್ಕೆ ಆಲ್​ ರೌಂಡರ್ ವಿಜಯ್ ಶಂಕರ್ ಆಡುವ 11ರ ಬಳಗ ಸೇರಿದ್ರು. ನಿನ್ನೆ ಇಂಗ್ಲೆಂಡ್ ವಿರುದ್ಧದ ಮ್ಯಾಚ್ ನಿಂದ ವಿಜಯ್ ಅವರನ್ನು ಹೊರಗಿಟ್ಟು ರಿಷಬ್ ಪಂತ್ ಅವರಿಗೆ ಚಾನ್ಸ್ ನೀಡಲಾಗಿತ್ತು.
ಇತ್ತೀಚೆಗೆ ಪ್ರಾಕ್ಟೀಸ್ ವೇಳೆ ವಿಜಯ್ ಶಂಕರ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ರು. ಇದೀಗ ಗಾಯದ ಸಮಸ್ಯೆ ಬಿಗುಡಾಯಿಸಿದ್ದು, ಅವರು ಟೂರ್ನಿಯಿಂದಲೇ ಔಟ್ ಆಗಿದ್ದಾರೆ.ವಿಜಯ್ ಶಂಕರ್ ಬದಲಿಗೆ ಕನ್ನಡಿಗ ಮಯಾಂಕ್ ಅಗರವಾಲ್ ಅವರಿಗೆ ಬುಲಾವ್ ನೀಡಲಾಗಿದ್ದು, ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

Recent Comments