Monday, January 17, 2022
Powertv Logo
HomePower Specialಇಂಟರ್ ಪೋಲ್ ಬಗ್ಗೆ ಮಾಹಿತಿ

ಇಂಟರ್ ಪೋಲ್ ಬಗ್ಗೆ ಮಾಹಿತಿ

ಇತ್ತೀಚೆಗೆ, ಕೇಂದ್ರೀಯ ತನಿಖಾ ದಳದ (Central Bureau of Investigation CBI) ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಅವರನ್ನು ಇಂಟರ್‌ಪೋಲ್ ತನ್ನ ಕಾರ್ಯಕಾರಿ ಸಮಿತಿಯಲ್ಲಿ ಏಷ್ಯಾದ ಪ್ರತಿನಿಧಿಯಾಗಿ ಆಯ್ಕೆ ಮಾಡಿದೆ. ಇಂಟರ್‌ಪೋಲ್‌ನ ‘ಕಾರ್ಯಕಾರಿ ಸಮಿತಿ’ಯು ವಿವಿಧ ದೇಶಗಳ 13 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಒಬ್ಬರು ಇಂಟರ್‌ಪೋಲ್‌ನ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಒಂಬತ್ತು ಪ್ರತಿನಿಧಿ ಸದಸ್ಯರು ಇರುತ್ತಾರೆ. ಈ ಸಮಿತಿಯು ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯ ನಿರ್ಧಾರಗಳನ್ನು ಮತ್ತು ಅದರ ಮುಖ್ಯ ಕಾರ್ಯದರ್ಶಿಯ ಆಡಳಿತ ಮತ್ತು ಕಾರ್ಯಗಳನ್ನು ಕಾರ್ಯಗತಗೊಳಿಸುವುದನ್ನು ಮೇಲ್ವಿಚಾರಣೆ ಮಾಡುತ್ತದೆ. ‘ಕಾರ್ಯಕಾರಿ ಸಮಿತಿ’ ವರ್ಷಕ್ಕೆ ಮೂರು ಬಾರಿ ಸಭೆ ನಡೆಸುತ್ತದೆ, ಇದರಲ್ಲಿ ಸಾಂಸ್ಥಿಕ ನೀತಿ ಮತ್ತು ನಿರ್ದೇಶನವನ್ನು ನಿರ್ಧರಿಸಲಾಗುತ್ತದೆ.

ಇಂಟರ್ಪೋಲ್ ಎಂದರೇನು?

ಇಂಟರ್ ಪೋಲ್. ಇಂಟರ್ ನ್ಯಾಷನಲ್ ಕ್ರಿಮಿನಲ್ ಪೋಲಿಸ್ ಆರ್ಗನೈಸೇಶನ್ ಒಂದು ಅಂತರರಾಷ್ಟ್ರೀಯ ಅಪರಾಧಗಳ ಪೋಲಿಸ್ ಸಂಸ್ಥೆಯಾಗಿದೆ, ಅಥವಾ ಇದೊಂದು 194 ಸದಸ್ಯರ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಇದರ ಕೇಂದ್ರ ಕಚೇರಿಯು ಫ್ರಾನ್ಸ್​ನ ಲಿಯಾನ್​ನಲ್ಲಿದೆ. 1923 ರಲ್ಲಿ ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಆಯೋಗವಾಗಿ ಸ್ಥಾಪಿಸಲಾಯಿತು ಮತ್ತು 1956 ರಲ್ಲಿ ಇಂಟರ್ಪೋಲ್ ಎಂದು ಕರೆಯಲು ಪ್ರಾರಂಭಿಸಲಾಯಿತು. ಭಾರತವು 1949ರಲ್ಲಿ ಈ ಸಂಸ್ಥೆಗೆ ಸೇರಿದ್ದು ಇದರ ಹಳೆಯ ಸದಸ್ಯರಲ್ಲಿ ಒಂದಾಗಿದೆ.

ಇಂಟರ್ಪೋಲ್ ಘೋಷಿಸಿದ ಜಾಗತಿಕ ಪೊಲೀಸ್ ಗುರಿಗಳು..

ಭಯೋತ್ಪಾದನೆಯನ್ನು ಎದುರಿಸುವುದು, ವಿಶ್ವಾದ್ಯಂತ ಗಡಿಗಳ ಸಮಗ್ರತೆಯನ್ನು ಉತ್ತೇಜಿಸುವುದು, ದುರ್ಬಲ ಸಮುದಾಯಗಳ ರಕ್ಷಣೆ, ಜನರು ಮತ್ತು ವ್ಯವಹಾರಗಳಿಗೆ ಸುರಕ್ಷಿತ ಸೈಬರ್‌ಪೇಸ್ ಒದಗಿಸುವುದು, ಅಕ್ರಮ ಮಾರುಕಟ್ಟೆಗಳನ್ನು ನಿಗ್ರಹಿಸುವುದು, ಪರಿಸರ ಸುರಕ್ಷತೆಯನ್ನು ಬೆಂಬಲಿಸುವುದು ಮತ್ತು ಜಾಗತಿಕ ಸಮಗ್ರತೆ / ಏಕತೆಯನ್ನು ಉತ್ತೇಜಿಸುವುದು.

LEAVE A REPLY

Please enter your comment!
Please enter your name here

- Advertisment -

Most Popular

Recent Comments