Home ರಾಜ್ಯ ನಮ್ಮ ಸುದ್ದಿಗೆ ಬಂದರೆ ಪಾಕಿಸ್ತಾನ ಆಗಬಹುದು ಅಥವಾ ಚೀನಾ ಆಗಬಹುದು ಸದೆ ಬಡಿಯುತ್ತೇವೆ- ಕೆ.ಎಸ್. ಈಶ್ವರಪ್ಪ!

ನಮ್ಮ ಸುದ್ದಿಗೆ ಬಂದರೆ ಪಾಕಿಸ್ತಾನ ಆಗಬಹುದು ಅಥವಾ ಚೀನಾ ಆಗಬಹುದು ಸದೆ ಬಡಿಯುತ್ತೇವೆ- ಕೆ.ಎಸ್. ಈಶ್ವರಪ್ಪ!

ಶಿವಮೊಗ್ಗ :  ಕೋವಿಡ್ 19 ವೈರಸ್ ನಿಂದ ಉಂಟಾಗಿರುವ ಮುಖಭಂಗವನ್ನು ತಪ್ಪಿಸಿಕೊಳ್ಳಲು ಹಾಗೂ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಭಾರತದ ಮೇಲೆ ಚೀನಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸೈನ್ಯ ಶಕ್ತಿಶಾಲಿಯಾಗಿದೆ. ಚೀನಾದ ಆಕ್ರಮಣಕಾರಿ ನೀತಿಗೆ ತಕ್ಕ ಉತ್ತರ ನೀಡಲಿದೆ. ಹೀಗೆ ಕಾಲುಕೆರೆದು ಜಗಳಕ್ಕೆ ಬಂದರೆ ಚೀನಾ ಸೈನ್ಯವನ್ನು ಭಾರತೀಯ ಸೇನೆ ಸದೆಬಡೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಈಗಾಗಲೇ ಚೀನಾ ಉತ್ಪನ್ನಗಳನ್ನು ಬಳಕೆ ಮಾಡದಿರುವಂತೆ ದೇಶವಾಸಿಗಳಿಗೆ ಕರೆ ನೀಡಲಾಗಿದೆ. ಅಲ್ಲದೆ, ಚೀನಾಕ್ಕೆ ಹೊಂದಿಕೊಂಡಂತಿರುವ ಭಾರತದ ಭೂ ಪ್ರದೇಶದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಚೈನಾ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಭಾರತದ ಮೇಲೆ ಜಗಳಕ್ಕೆ ಬರುತ್ತಿದೆ ಎಂದು ಆಪಾದಿಸಿದ್ದಾರೆ. ಗಡಿ ಭಾಗದಲ್ಲಿ ನಮ್ಮ 20 ಸೈನಿಕರನ್ನು ಚೀನಾ ಸೈನಿಕರು ಹತ್ಯೆ ಮಾಡಿದ್ದಾರೆ. ಅದಕ್ಕೆ ವಿರುದ್ದವಾಗಿ ನಮ್ಮ ಯೋಧರು ಚೀನಾದ 41 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ರಸ್ತೆ ಅಭಿವೃದ್ಧಿ ಮಾಡುತ್ತಿರುವುದನ್ನು ಚೀನಾ ತಪ್ಪಾಗಿ ಭಾವಿಸಿದೆ. ಭಾರತ ನಮ್ಮ ದೇಶದ ಮೇಲೆ ಯುದ್ದ ಮಾಡುವ ಸಲುವಾಗಿ ರಸ್ತೆ ನಿರ್ಮಿಸುತ್ತಿದೆ ಎಂದುಕೊಂಡಿದೆ. ಭಾರತ ಎಂದಿಗೂ ಕೂಡಾ ಪಾಕಿಸ್ತಾನ ಇರಬಹುದು ಚೀನಾ ಇರಬಹುದು ಅಥವಾ ಯಾವ ದೇಶದ ಮೇಲೂ ಭಾರತ ತಾನಾಗೇ ಯುದ್ದಕ್ಕೆ ಹೋಗುವುದಿಲ್ಲ. ಹಿಂದಿನ ಸರ್ಕಾರದ ವೇಳೆ ನಮ್ಮ‌ ಸೈನಿಕರ ಜೀವಕ್ಕೆ ತೊಂದರೆ ಆದಾಗ ಸ್ವಲ್ಪ ತಾತ್ಸಾರ ಮನೋಭಾವನೆ ನಡೆದಿತ್ತು. ವಿಶ್ವಸಂಸ್ಥೆ ಕೇಳಬೇಕು ಎನ್ನುತ್ತಿತ್ತು. ಆದರೆ, ಈಗ ಹಾಗಲ್ಲ. ನಮ್ಮ ಸೈನಿಕರಿಗೆ ಎದುರಾಳಿ ರಾಷ್ಟ್ರದ ಸೈನಿಕರು ಹೊಡೆದರೆ ನಮ್ಮ ಸೈನಿಕರು ಸಹ ಹೊಡೆಯಬಹುದು ಆ ಸ್ವಾಂತತ್ರ್ಯ ಇದೆ. ಹೀಗಾಗಿ ನಮ್ಮ ಸೈನಿಕರು ಆತ್ಮ ವಿಶ್ವಾಸದಿಂದ ಇದ್ದಾರೆ. ಈ ವಿಷಯದಲ್ಲಿ ಭಾರತ ಹಿಂದೆ ಬೀಳುವುದಿಲ್ಲ. ಭಾರತ ಏನು ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಭಾರತ ಯಾವ ರಾಷ್ಟ್ರಕ್ಕೂ ತೊಂದರೆ ಕೊಡುವುದಿಲ್ಲ. ಅದರ ಸುದ್ದಿಗೆ ಹೋದರೆ ಬಿಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ, ಭಾರತದ ಶಕ್ತಿ ಚೀನಾಗೆ ಗೊತ್ತಿದೆ. ಭಾರತದಲ್ಲಿ ಯಾವ ಯಾವ ಅಣುಬಾಂಬ್ ಇದೆ ಎಂಬುದು ಅವರಿಗೆ ತಿಳಿದಿದೆ. ಯುದ್ದ ಆಗುತ್ತೆ ಎಂಬುದನ್ನು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಭಾರತದ ಜೊತೆ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳು ಇವೆ. ಮೋದಿ ಪ್ರಧಾನಿ ಆಗುವ ಮೊದಲು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳು ಪಾಕಿಸ್ತಾನ ಹಾಗೂ ಚೀನಾದ ಜೊತೆ ಇದ್ದವು. ಈಗ ಚೀನಾ ಹಾಗೂ ಪಾಕಿಸ್ತಾನ ಒಬ್ಬಂಟಿ ಆಗಿವೆ. ಭಾರತದ ಜೊತೆ ಪ್ರಪಂಚದ ಎಲ್ಲಾ ರಾಷ್ಟ್ರಗಳು ಇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಚೀನಾ ಯುದ್ದಕ್ಕೆ ಬರುವಷ್ಟು ಧೈರ್ಯ ಇಲ್ಲವಾಗಿದ್ದು, ಆಕಸ್ಮಾತ್ ಚೀನಾ ಯುದ್ದಕ್ಕೆ ಬಂದರೆ ಈಡಿ ವಿಶ್ವ ಭಾರತದ ಜೊತೆಗೆ ನಿಲ್ಲುತ್ತೆ. ನಮ್ಮ ಸುದ್ದಿಗೆ ಬಂದರೆ ಪಾಕಿಸ್ತಾನ ಆಗಬಹುದು ಅಥವಾ ಚೀನಾ ಆಗಬಹುದು ಸದೆ ಬಡಿಯುತ್ತೇವೆ. ಆ ಶಕ್ತಿ ನಮ್ಮ ಸೈನಿಕರಿಗೆ ಇದೆ. ನಮ್ಮ ಸುದ್ದಿಗೆ ಬಂದರೆ ಚೈನಾ ಅನುಭವಿಸೋದು ಸತ್ಯ ಎಂದು ಈಶ್ವರಪ್ಪ ಚೀನಾ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾಗೆ ಕ್ಯಾರೆ ಅನ್ನದೆ ನೃತ್ಯ ಮಾಡಿ ಧೈರ್ಯ ತುಂಬಿದ ಹೋಟೆಲ್ ಮಾಲಕ

ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ...

ಸಂಬಳ ಕೇಳಿದರೆ ಕೆಲಸದಿಂದ ತೆಗೆಯುತ್ತೇವೆ ! ವಿಮ್ಸ್​​ನಲ್ಲಿ ಇದೆಂಥಾ ಅಮಾನವೀಯತೆ ?

ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ...

ಕೊರೋನಾ ಗೆದ್ದ 96 ವೃದ್ಧೆ ಈಗ ಕೊರೋನಾ ರೋಗಿಗಳಿಗೆ ಸ್ಫೂರ್ತಿ

ಚಿತ್ರದುರ್ಗ : ಕೊರೋನಾ ಸೋಂಕಿನ ಭೀತಿ ಎಲ್ಲೆಡೆ ಹಬ್ಬಿದ್ದರೂ, ಆತ್ಮಿವಿಶ್ವಾಸವೊಂದಿದ್ದರೆ ಕೊರೋನಾ ಸೋಂಕಿನಿಂದ ಗುಣವಾಗಬಹುದು ಎನ್ನುವುದಕ್ಕೆ ಈ ವೃದ್ಧೆಯೇ ಸಾಕ್ಷಿ. ಚಿತ್ರದುರ್ಗ  ‌ಜಿಲ್ಲೆಯ ಹಿರಿಯೂರು ಮೂಲದ 96 ವರ್ಷದ ವೃದ್ದೆ ಕರೋನಾ ಸೋಂಕಿನಿಂದ...

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ...