ಇಂದಿರಾ ಕ್ಯಾಂಟೀನ್​ನಲ್ಲಿ ಫುಡ್ ಸೇಫ್ !

0
143

ಇಂದಿರಾ ಕ್ಯಾಂಟೀನ್ ಪ್ರಾಜೆಕ್ಟ್​​​​ ಎದುರಾಗಿದ್ದ ವಿಘ್ನ ದೂರವಾಗಿದೆ.  ಅನುಮಾನವಿಲ್ಲದೆ ಇಂದಿರಾ ಕ್ಯಾಂಟೀನ್ ಆಹಾರ ಸೇವಿಸಬಹುದು ಎಂದು ಸರ್ಕಾರದ FSSAI ಏಜೆನ್ಸಿ ಖಚಿತ ಪಡಿಸಿದೆ.  

ಇತ್ತೀಚೆಗೆ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಇಂದಿರಾ ಕ್ಯಾಂಟೀನ್​ನ ಆಹಾರ  ಸ್ಲೋ ಪಾಯ್ಸನ್ ಇದ್ದಹಾಗೆ ಎಂದು ಆರೋಪಿಸಿದ್ದರು. ಆರೋಪದಿಂದ ಜನರು ಇಂದಿರಾ ಕ್ಯಾಂಟೀನ್​ನಲ್ಲಿ ಊಟ ಮಾಡಬೇಕೋ ಬೇಡವೋ ಎಂದು ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರದ FSSAI ಏಜೆನ್ಸಿಗೆ ಕಳುಹಿಸಲಾಗಿತ್ತು. ಇದೀಗ ಏಜೆನ್ಸಿಯಿಂದ ವರದಿ ಬಂದಿದ್ದು ಇಂದಿರಾ ಕ್ಯಾಂಟೀನ್ ನ ಆಹಾರ ಸೇಫ್ ಆಗಿದೆ ಎಂದು ತಿಳಿದು ಬಂದಿದೆ.

ಇಂದಿನ ಕೌನ್ಸಿಲ್ ಮೀಟಿಂಗ್​ನಲ್ಲಿ ವರದಿ ಮಂಡಿಸಲಿರುವ ಮೈತ್ರಿ ಆಡಳಿತ ಸುಳ್ಳು ಆಪಾದನೆ ಮಾಡಿದ್ದ ಉಮೇಶ್ ಶೆಟ್ಟಿ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದೆ.

LEAVE A REPLY

Please enter your comment!
Please enter your name here