ಉದ್ಘಾಟನೆಯಾಗಿ ಎರಡನೇ ದಿನಕ್ಕೆ ವಂದೇ ಭಾರತ್​ ಎಕ್ಸ್​​ಪ್ರೆಸ್​​ನಲ್ಲಿ ತಾಂತ್ರಿಕ ದೋಷ

0
304

ದೆಹಲಿ: ವಂದೇ ಭಾರತ್​ ಎಕ್ಸ್​ಪ್ರೆಸ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಉದ್ಘಾಟನೆಯಾದ ಎರಡನೇ ದಿನಕ್ಕೇ ಭಾರತದ ಅತ್ಯಂತ ವೇಗದ ರೈಲಿನ ಬ್ರೇಕಿಂಗ್​ ಸಿಸ್ಟಮ್​ನಲ್ಲಿ ದೋಷ ಕಾಣಿಸಿದೆ. ಪ್ರಧಾನಿ ಮೋದಿ ರೈಲನ್ನು ದೆಹಲಿಯಲ್ಲಿ ಉದ್ಘಾಟಿಸಿದ್ದರು. ಉದ್ಘಾಟನೆ ನಂತರ ತನ್ನ ಮೊದಲ ಪ್ರಯಾಣ ಆರಂಭಿಸಿ ಹಿಂದಿರುಗುವಾಗ ದೆಹಲಿಯಿಂದ 200 ಕಿ.ಮೀ ದೂರದಲ್ಲಿ ರೈಲು ಕೆಟ್ಟು ನಿಂತಿದೆ. ಎಂಜಿನ್​ರಹಿತ ರೈಲು ವಾರಣಾಸಿಯಿಂದ ದೆಹಲಿ ಕಡೆಗೆ ಬರುತ್ತಿತ್ತು. ಬೆಳಗ್ಗೆ 8.30ರ ವೇಳೆಗೆ ರೈಲು ಕೆಟ್ಟು ನಿಂತಿದೆ.

ರೈಲು ನಿಯಂತ್ರಣದಲ್ಲಿ ಸಮಸ್ಯೆಯಾಗಿ, ಸದ್ಯದಲ್ಲಿಯೇ ದುರಸ್ತಿ ಮಾಡಲು ಸಾಧ್ಯವಿಲ್ಲ. ರಿಪೇರಿಗಾಗಿ ರೈಲನ್ನು ದೆಹಲಿಗೆ ಒಯ್ಯಬೇಕಾಗುತ್ತದೆ ಅಂತ ರೈಲ್ವೇ ಸಿಬ್ಬಂದಿ ತಿಳಿಸಿದ್ದಾರೆ. ಪ್ರಯಾಣಿಕರನ್ನು ಬೇರೆ ಎರಡು ಟ್ರೈನ್​​ಗಳಿಗೆ ಶಿಫ್ಟ್​ ಮಾಡಲಾಗಿದೆ. ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಎಸಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತ್ತು. ಹಾಗೇ ಕೆಲವು ಕೋಚ್​ಗಳಲ್ಲಿ ವಿದ್ಯುತ್ ಕೈ ಕೊಟ್ಟಿತ್ತು.

ಚೆನ್ನೈನ ಇಂಟೆಗ್ರಲ್ ಕೋಚ್​ ಕಾರ್ಖಾನೆ ರೈಲನ್ನು ನಿರ್ಮಿಸಿದ್ದು, ಮೂರು ಪ್ರಯೋಗಾತ್ಮಕ ಪ್ರಯಾಣಗಳನ್ನು ಯಶಸ್ವಿಯಾಗಿ ಮುಗಿಸಿದೆ. ಹಾಗೇ ಈ ಸಂದರ್ಭ 7,000 ಕಿ.ಮೀ ದೂರವನ್ನು ಕ್ರಮಿಸಿದೆ.

LEAVE A REPLY

Please enter your comment!
Please enter your name here