Tuesday, January 25, 2022
Powertv Logo
Homeಕ್ರೀಡೆಕೊನೆ ಟೆಸ್ಟ್​ನಲ್ಲಿ ಭಾರತದ ಸಾಧಾರಣ ಮೊತ್ತ

ಕೊನೆ ಟೆಸ್ಟ್​ನಲ್ಲಿ ಭಾರತದ ಸಾಧಾರಣ ಮೊತ್ತ

ಕೇಪ್​ಟೌನ್ : ದಕ್ಷಿಣ ಆಫ್ರಿಕಾದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಡುವೆ ನಡೆಯುತ್ತಿರುವ ಮೂರನೆಯ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಇಂದು ಮೊದಲನೆಯ ದಿನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ತುಕೊಂಡಿತ್ತು. ಆದರೆ ಕ್ಯಾಪ್ಟನ್ ಕೊಹ್ಲಿಯ ಈ ನಿರ್ಣಯವನ್ನು ತಂಡದ ಆಟಗಾರರು ಒಬ್ಬರ ಹಿಂದೆ ಒಬ್ಬರು ಔಟಾಗುವ ಮೂಲಕ ತಪ್ಪು ಎಂದು ಪರೋಕ್ಷವಾಗಿ ಸಾರಿ ಹೇಳಿದರು.

ಯಾವಾಗಲೂ ತಂಡಕ್ಕೆ ಆಪತ್ಬಾಂಧವನಾಗಿರುತ್ತಿದ್ದ ಕನ್ನಡದ ಕೆ.ಎಲ್.ರಾಹುಲ್ ಇಂದು ಅರ್ಧಶತಕವನ್ನೂ ಸಹ ಗಳಿಸದೆ ಪೆವಿಲಿಯನ್​ಗೆ ವಾಪಸಾದರು. ಇದ್ದುದರಲ್ಲಿ ಇಂದು ಕ್ಯಾಪ್ಟನ್ಸಿ ಆಟವಾಡಿದ ವಿರಾಟ್ ಕೊಹ್ಲಿ 79 ರನ್​ಗಳನ್ನು ಹೊಡೆದು 9ನೆಯ ಬಲಿಯಾದರು. ಕಡೆಯಲ್ಲಿ ಭಾರತ 223ಕ್ಕೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ದಕ್ಷಿಣ ಆಫ್ರಿಕ ತನ್ನ ಮೊದಲನೇ ಇನ್ನಿಂಗ್ಸ್​ನಲ್ಲಿ 3 ಓವರ್​ನಲ್ಲಿ 3 ರನ್ ಮಾಡಿ ಆಟವಾಡುತ್ತಿದೆ.

- Advertisment -

Most Popular

Recent Comments