Homeರಾಜ್ಯಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್​​​​ನಿಂದ ಯುವಕನಿಗೆ ಪ್ರಶಸ್ತಿ..!

ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್​​​​ನಿಂದ ಯುವಕನಿಗೆ ಪ್ರಶಸ್ತಿ..!

ಶಿವಮೊಗ್ಗ: ಸಾಮಾನ್ಯವಾಗಿ ಒಂದು ನೋಟಿನ ಬಂಡಲ್​​​​ನಲ್ಲಿ ಎಷ್ಟು ನೋಟುಗಳಿವೆ ಅಂತಾ ಹೇಳು ಅಂದ್ರೆ ಹೇಳಬಹುದು. ಹಾಗೆ ಅದೇ ರೀತಿ ಒಂದು ಕೆಜಿ ಬಟಾಣಿ, ಎಷ್ಟು ಕಾಳುಗಳಿವೆ ಎಂತಲೂ ಹೇಳಬಹುದು. ಆದ್ರೆ ಒಂದು ಕೆ.ಜಿ ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂದು ಏಣಿಸೋದು ಕಷ್ಟದ ಕೆಲ್ಸ. ಆದ್ರೆ ಇಲ್ಲೊಬ್ಬ ಕಾಲೇಜು ಯುವಕ 1 ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂದು ಏಣಿಸಿ ವರ್ಲ್ಡ್​​ ರೆಕಾರ್ಡ್​​ಗೆ ಪಾತ್ರನಾಗಿದ್ದಾನೆ.

ಸಾಮಾನ್ಯವಾಗಿ ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಅಂತಾ ಯಾರಾದ್ರೂ ಕೇಳಿದ್ರೆ, ಅದು ಹೇಳೋದು ಕಷ್ಟ. ಅದನ್ನ ಎಣಿಸಿ ಹೇಳೋದು ಕೂಡ ಕಠಿಣ ಸ್ಥಿತಿ. ಆದ್ರೆ ಮಂಡ್ಯ ಮೂಲದ ಶಿವಮೊಗ್ಗದ ಯುವಕನೊಬ್ಬ ರಾಗಿ ಕಾಳುಗಳನ್ನ ಒಂದು ಕೆ.ಜಿ.ಯಲ್ಲಿ ಎಷ್ಟು ಇರುತ್ತವೆ ಅಂತಾ ಎಣಿಸಿ ಸಾಧಿಸಿ ಸೈ ಎನಿಸಿಕೊಂಡಿದ್ದಾನೆ. ಈ ಮೂಲಕ, ರಾಗಿ ಬೆಳೆಯುವ ರೈತ ಶ್ರಮದ ಮಹತ್ವ ಸಾರಿದ್ದಾನೆ. ಮಂಡ್ಯ ಮೂಲದ  ಶಿವಮೊಗ್ಗದಲ್ಲಿ ನೆಲೆಸಿರುವ ಈತನ ಹೆಸರು ಸಚಿನ್ ಅಂತಾ. ಜಿಲ್ಲೆಯ ಕಾಲೇಜೊಂದರಲ್ಲಿ ಬಿ.ಕಾಂ. ಓದುತ್ತಿದ್ದಾನೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವ್ಯಾಸಂಗ ಮಾಡುತ್ತಿದ್ದ ಈತ ಡಿಸ್ಕ್ವಾಲಿಫೈಡ್ ಆಗಿದ್ದು, ಈತನ ಕುಟುಂಬ ಕೂಡ ಬೇಸರಗೊಂಡಿತ್ತು. ಆದ್ರೀಗ ರಾಗಿ ಕಾಳು ಎಣಿಸಿ, ಸಾಧನೆ ಮಾಡಿದ್ದಾನೆ.

ಅಷ್ಟಕ್ಕೂ, ಯುವಕ ಸಚಿನ್, ಒಂದು ಕೆ.ಜಿ. ರಾಗಿ ಏಣಿಸಲು 146 ಗಂಟೆ 30 ನಿಮಿಷ ತೆಗೆದುಕೊಂಡಿದ್ದು, ಇದನ್ನು ಐ.ಡಬ್ಲ್ಯೂಆರ್ ಫೌಂಡೇಷನ್​​​ನವರು, ವಿಡಿಯೋ ಕಾಲ್ ಮಾಡಿ ಪರೀಕ್ಷೆ ಕೂಡ ಮಾಡಿದ್ದಾರಂತೆ.  ಸಾಮಾನ್ಯವಾಗಿ, ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳುವ ಪ್ರಯತ್ನವೂ ಮಾಡೋದಿಲ್ಲ. ಆದರೆ, ಈ ಕೆಲಸವನ್ನು ಸಚಿನ್ ಮಾಡಿ ತೋರಿಸಿ ಒಂದು ಕೆ.ಜಿ ರಾಗಿಯಲ್ಲಿ 3,76,083 ಕಾಳುಗಳು ಇರುತ್ತವೆ ಎಂದು ತೋರಿಸಿ ಕೊಟ್ಟಿದ್ದಾನೆ.  ಪ್ರತಿ ಪ್ಯಾಕೆಟ್ ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ರಾಗಿ ಕಾಳುಗಳನ್ನು ಕೂಡ ಹೆಚ್ಚು ಕಡಿಮೆಯಾಗದಂತೆ ಏಣಿಸಿರುವುದು ವಿಶೇಷವಾಗಿದ್ದು, ಅತಿ ಕ್ಲಿಷ್ಟಕರವಾದ ಈ ವಿಭಿನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಇವರಿಗೆ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿದೆ.

ಒಟ್ಟಾರೆ, ರಾಜ್ಯದಲ್ಲಿ ರಾಗಿ ಬೆಳೆಗೆ ವಿಶೇಷವಾದ ಮಹತ್ವವಿದೆ. ಗ್ರಾಮೀಣ ಭಾಗದ ಜನರು ರಾಗಿ ಬೆಳೆಯನ್ನು ಸಾಕಷ್ಟು ಅವಲಂಭಿಸಿದ್ದು, ಈ ಬೆಳೆಯನ್ನು ಬೆಳೆಯಲು, ರೈತರ ಶ್ರಮ ಅಪಾರವಾಗಿದೆ. ಒಂದು ಕಾಳು ಬೆಳೆಯ ಹಿಂದೆಯೂ, ಮಹತ್ವವಾದ ಪರಿಶ್ರಮವಿದ್ದು, ಸಚಿನ್ ಸಾಧನೆಯಿಂದ ಇದೀಗ ರಾಗಿ ಬೆಳೆಗಾರರಿಗೆ ಬೆಂಬಲ ಹೆಚ್ಚಾಗುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments