Home P.Special ಬಡವರಿಗಾಗಿ ತಮ್ಮ ಕಚೇರಿಯನ್ನೇ ಕೊವಿಡ್ ಆಸ್ಪತ್ರೆ ಮಾಡಿದ ಉದ್ಯಮಿ ..!

ಬಡವರಿಗಾಗಿ ತಮ್ಮ ಕಚೇರಿಯನ್ನೇ ಕೊವಿಡ್ ಆಸ್ಪತ್ರೆ ಮಾಡಿದ ಉದ್ಯಮಿ ..!

ಕೊರೋನಾ ಇಡೀ ವಿಶ್ವವನ್ನು ಹೈರಾಣಾಗಿಸಿದೆ . ದಿನೇ ದಿನೇ ಸೋಂಕು ವ್ಯಾಪಿಸುತ್ತಿದ್ದಂತೆ ಜನ ಆತಂಕಕ್ಕೆ ಒಳಗಾಗಿದ್ದಾರೆ. ಅನೇಕರು ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಉದ್ಯಮಿ ತಮ್ಮ ಕಚೇರಿಯನ್ನೇ ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದಾರೆ.

ಹೌದು ಸೂರತ್​​​​ ಮೂಲದ ಉದ್ಯಮಿ ಖಾದರ್ ಶೇಖ್ ತಮ್ಮ ಕಚೇರಿಯನ್ನು ಕೊವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದವರು.  ಕೆಲವು ದಿನಗಳ ಹಿಂದೆ ಖಾದರ್ ಅವ್ರಿಗೆ ಕೊರೋನಾ ಸೋಂಕು ತಗುಲಿತ್ತು. ಅವರು ಆಸ್ಪತ್ರೆ ಸೇರಿದ್ರು. ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವಾಗ ಬಿಲ್ ನೋಡಿ ತಲೆತಿರುಗಿತ್ತು.. ಅರ್ಥಾತ್ ಅಷ್ಟೊಂದು ದೊಡ್ಡ ಮೊತ್ತ ಬಿಲ್ ಬಂದಿತ್ತು. 20 ದಿನಗಳ ಟ್ರೀಟ್ಮೆಂಟ್​​ಗೆ ಭಾರೀ ದೊಡ್ಡ ಮೊತ್ತದ ಬಿಲ್ ಕಟ್ಟಿ ಮನೆಗೆ ಬಂದ ಖಾದರ್ , ದುಡ್ಡಿರೋರಿಗೆ ಏನೋ ಆಗುತ್ತೆ, ಬಿಲ್ ಎಷ್ಟೇ ಬಂದ್ರು ಕಟ್ಟಿ ಬರ್ತಾರೆ.. ಆದ್ರೆ ಬಡವರ ಕಥೆ ಏನು ಅಂತ ಯೋಚ್ನೆ ಮಾಡ್ತಾರೆ. ಅಷ್ಟೇ ಅಲ್ಲ ತಾನು ತನ್ನ ಕೈಲಾದ ಕೆಲಸ ಮಾಡ್ಬೇಕು .. ಬಡವರಿಗೆ ನೆರವಾಗ್ಬೇಕು ಅಂತ ಡಿಸೈಡ್ ಮಾಡಿದ ಅವರು, ತಮ್ಮ ಕಚೇರಿಯನ್ನು ಕೊವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಾರೆ!

30,000 ಚದರ ಅಡಿ ಆಫೀಸನ್ನು ಕೊವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ . 85 ಬೆಡ್​​​ಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಖಾದರ್ ಕಾರ್ಯಕ್ಕೆ ಸರ್ಕಾರ ಸಾಥ್ ನೀಡಿದೆ. ಮೆಡಿಕಲ್​ ಇಕ್ವಿಪ್​ಮೆಂಟ್ಸ್​​​ ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರ ಮುಂದಾಗಿದೆ. ಖಾದರ್ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಮಂಗಳೂರು ನಗರ ವ್ಯಾಪ್ತಿಯಲ್ಲಿ ‘ನಿಷೇಧಾಜ್ಞೆ’ ಜಾರಿಗೆ ಪೊಲೀಸ್ ಕಮೀಷನರ್ ಆದೇಶ..!

ಮಂಗಳೂರು : ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಭೂಮಿ ಪೂಜೆ ಹಿನ್ನೆಲೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಆದೇಶವನ್ನ ಹೊರಡಿಸಿದ್ದು,...

ಎಂಟಿಬಿ v/s ಶರತ್ ಮುಸುಕಿನ ಗುದ್ದಾಟ ಶುರು

ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿನ ರಾಜಕೀಯ. ಕಳೆದ ಬೈ ಎಲೆಕ್ಷನ್ ನಲ್ಲಿ ಎಂಟಿಬಿ ನಾಗರಾಜ್ ಸೋತ ನಂತರ ಹೊಸಕೋಟೆ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು...

ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ಇಲ್ಲ – ಮೃತನ ಸಂಬಂಧಿಕರಿಂದ ಆಕ್ರೋಶ

ದೇವನಹಳ್ಳಿ : ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ ಅಂತ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ...

ಶಾಸಕರಿಗೆ ರಾಖಿ ಕಟ್ಟಿದ ಮಹಿಳೆಯರು..

ಕೊಪ್ಪಳ : ಇಂದು ರಾಖಿ ಹಬ್ಬ.. ನಾಡಿನೆಲ್ಲೆಡೆ ತಂಗಿಯರು ಅಣ್ಣಂದಿರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಅವರಿಗೂ...

Recent Comments