Friday, September 30, 2022
Powertv Logo
Homeದೇಶಅಮೆರಿಕಾದಲ್ಲಿ ಸಿಎಎ ಪರ ಘೋಷಣೆ!

ಅಮೆರಿಕಾದಲ್ಲಿ ಸಿಎಎ ಪರ ಘೋಷಣೆ!

ವಾಷಿಂಗ್ಟನ್​ :  ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ  ಪರ ಮತ್ತು ವಿರೋಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ.  ಈ ನಡುವೆ ಅಮೇರಿಕಾದಲ್ಲಿ  ಸಿಎಎ ಪರವಾದ ಘೋಷಣೆಗಳು ಮೊಳಗಿದೆ.

ವಾಷಿಂಗ್ಟನ್​ ಹಾಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಅನಿವಾಸಿ ಭಾರತೀಯರು ಹಾಗೂ ಕೆಲ ಅಮೇರಿಕಾ ಪ್ರಜೆಗಳು ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮೆರವಣಿಗೆ ನಡೆಸಿದ್ದಾರೆ. ಈ ಕಾಯ್ದೆ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಕಾಯ್ದೆಯಾಗಿದ್ದು ಇದರಲ್ಲಿ ಯಾವುದೇ ಬೇಧ ಭಾವವಿಲ್ಲ ಎಂಬ ಫಲಕಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ.

 ಈ ಮೆರವಣಿಗೆ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಎರಡೂ ದೇಶದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಎರಡೂ ರಾಷ್ಟ್ರಗಳಲ್ಲಿ ನಡೆಯುವ ಮಾನವ ಹತ್ಯೆ ನಿಲ್ಲಿಸಬೇಕೆಂದೂ ಜೊತೆಗೆ ಜಿಹಾದಿ ತಂತ್ರಗಳನ್ನು ನಿಲ್ಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisment -

Most Popular

Recent Comments