ವೆಸ್ಟ್​​ಇಂಡೀಸ್ ಪ್ರವಾಸಕ್ಕೆ ಕೊಹ್ಲಿ ಪಡೆಯಲ್ಲಿ ಮೂವರು ಕನ್ನಡಿಗರು..!

0
1061

ವೆಸ್ಟ್​ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಮೂವರು ಕನ್ನಡಿಗರು ಆಯ್ಕೆಯಾಗಿದ್ದಾರೆ.
ಕನ್ನಡಿಗರಾದ ಕೆ.ಎಲ್ ರಾಹುಲ್, ಮನೀಷ್​ ಪಾಂಡೆ ಹಾಗೂ ಮಯಾಂಕ್ ಅಗರ್​ವಾಲ್​ಗೆ ಬಿಸಿಸಿಐ ಮಣೆ ಹಾಕಿದೆ. ವೆಸ್ಟ್​ ಇಂಡೀಸ್ ವಿರುದ್ಧ ಭಾರತ 2 ಟೆಸ್ಟ್, 3 ಒಡಿಐ, 3 ಟಿ20 ಮ್ಯಾಚ್​ಗಳನ್ನು ಆಡಲಿದೆ. ಕೆ.ಎಲ್ ರಾಹುಲ್ ಟೆಸ್ಟ್ ಹಾಗೂ ಒಡಿಐ, ಟಿ20 ಮೂರು ಮಾದರಿಗೂ ಆಯ್ಕೆಯಾಗಿದ್ದಾರೆ. ಮನೀಷ್ ಪಾಂಡೆ ಟಿ20 ಮತ್ತು ಒಡಿಐಗೆ ಆಯ್ಕೆಯಾಗಿದ್ದು, ಮಯಾಂಕ್ ಅಗರ್ವಾಲ್ ಟೆಸ್ಟ್​​ಗೆ ಸೆಲೆಕ್ಟ್ ಆಗಿದ್ದಾರೆ.
ಇನ್ನು ವಿಶ್ವಕಪ್ ಬಳಿಕ ನಡೆಯುತ್ತಿರುವ ಈ ಟೂರ್ನಿಗೆ ವಿರಾಟ್​ಗೆ ರೆಸ್ಟ್ ನೀಡಿ ರೋಹಿತ್ ಶರ್ಮಾ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಮೂರೂ ಮಾದರಿಯಲ್ಲೂ ವಿರಾಟ್​ ಮುಂದಾಳತ್ವದಲ್ಲಿ ಭಾರತ ವಿಂಡೀಸ್ ವಿರುದ್ಧ ಆಡಲಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಆರ್ಮಿ ರೆಜಿಮೆಂಟ್​ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದು, ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದಿದ್ದಾರೆ.

ಅವರ ಬದಲಿಗೆ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಟೆಸ್ಟ್​​ಗೆ ಪಂತ್ ಜೊತೆಗೆ ವೃದ್ದಿಮಾನ್ ಸಾಹಾ ಕೂಡ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದಾರೆ.
ಇನ್ನುಳಿದಂತೆ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ರಾಹುಲ್ ಚಹಾರ್, ಖಲೀಲ್ ಅಹಮ್ಮದ್, ದೀಪಕ್ ಚಹಾರ್ ಹಾಗೂ ಆರ್​ಸಿಬಿ ವೇಗಿ ನವದೀಪ್ ಸೈನಿಗೆ ಅವಕಾಶ ಲಭಿಸಿದೆ. ಆಗಸ್ಟ್ 3ರಂದು ಮೊದಲ ಟಿ20 ಮ್ಯಾಚ್ ನಡೆಯಲಿದೆ. 

ಟಿ-20ತಂಡ: ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್ ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಶ್​ ಪಾಂಡೆ, ರಿಶಭ್​ ಪಂತ್​, ಕೃನಾಲ್​ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​, ರಾಹುಲ್​ ಚಹಾರ್​ ಭುವನೇಶ್ವರ್​ ಕುಮಾರ್​, ಖಲೀಲ್​ ಅಹ್ಮದ್​, ದೀಪಕ್​ ಚಹಾರ್​, ನವದೀಪ್​ ಸೈನಿ.

ಒಡಿಐ : ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಶ್​ ಪಾಂಡೆ, ರಿಶಭ್​ ಪಂತ್​(ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಯಜುವೇಂದ್ರ ಚಹಾಲ್​, ಕೇದಾರ್​ ಜಾಧವ್​, ಮೊಹಮ್ಮದ್​ ಶಮಿ, ಭುವನೇಶ್ವರ್​ ಕುಮಾರ್​, ಖಲೀಲ್​ ಅಹ್ಮದ್​, ನವದೀಪ್​ ಸೈನಿ.

ಟೆಸ್ಟ್​ ಸರಣಿಗೆ : ವಿರಾಟ್​ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಮಯಾಂಕ್​ ಅಗರ್ವಾಲ್​, ಕೆ.ಎಲ್.ರಾಹುಲ್​, ಚೇತೇಶ್ವರ ಪೂಜಾರಾ, ಹನುಮ ವಿಹಾರಿ, ರೋಹಿತ್​ ಶರ್ಮಾ, ರಿಶಭ್​ ಪಂತ್​(ವಿಕೆಟ್​ ಕೀಪರ್​), ವೃದ್ದಿಮಾನ್​ ಸಾಹಾ (ವಿಕೆಟ್​ ಕೀಪರ್​), ಆರ್​ ಅಶ್ವಿನ್​, ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಜಸ್ಪ್ರೀತ್​ ಬುಮ್ರಾ, ಉಮೇಶ್​ ಯಾದವ್​.

LEAVE A REPLY

Please enter your comment!
Please enter your name here