ಗೆಲುವಿನ ಹಳಿಗೆ ಮರಳಿದ ರೋಹಿತ್​ ಪಡೆ

0
306

ನ್ಯೂಜಿಲೆಂಡ್​​ ವಿರುದ್ಧದ 4ನೇ ಏಕದಿನದಲ್ಲಿ ಹೀನಾಯ ಸೋಲುಂಡಿದ್ದ ಟೀಮ್​ಇಂಡಿಯಾ 5ನೇ ಮ್ಯಾಚ್​ ಜಯಿಸುವ ಮೂಲಕ ಗೆಲುವಿನ ಹಳಿಗೆ ಮರಳಿದೆ.

ವೆಲ್ಲಿಂಗ್ಟನ್​ನಲ್ಲಿ ನಡೆದ ಸರಣಿಯ ಕೊನೆಯ ಮ್ಯಾಚ್​ನಲ್ಲಿ ಭಾರತ 35 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿದೆ.

ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ಇಂಡಿಯಾ 18 ರನ್​ಗಳಿಸುವಷ್ಟರಲ್ಲಿ 4 ವಿಕೆಟ್​​ ಕಳೆದುಕೊಂಡು ಆರಂಭಿಕ ವೈಫಲ್ಯ ಅನುಭವಿಸಿತು. ಆದ್ರೆ ಅಂಬಟಿ ರಾಯುಡು (90),ವಿಜಯ್​ ಶಂಕರ್ (45)​​ ಹಾಗೂ ಹಾರ್ದಿಕ್​ ಪಾಂಡ್ಯಾ(45) ಅವರ ಸಮಯೋಜಿತ ಬ್ಯಾಟಿಂಗ್​ ನೆರವಿನಿಂದ ಭಾರತ ಅಂತಿಮವಾಗಿ 252 ರನ್​ಗಳಿಸಿತು.

253 ರನ್​ಗಳ ಟಾರ್ಗೆಟ್​​ ಬೆನ್ನತ್ತಿದ ಅತಿಥೇಯರು ಭಾರತದ ಬೌಲಿಂಗ್​ ದಾಳಿ ಎದುರು ಮಂಕಾದರು. ಕಿವೀಸ್​ನ ಬ್ಯಾಟ್ಸ್​​ಮನ್​ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದ್ರು. ಪರಿಣಾಮವಾಗಿ 44.1 ಓವರ್​ಗಳಲ್ಲಿ 217 ರನ್​ಗಳಿಗೆ ​ನ್ಯೂಜಿಲೆಂಡ್​​ ಆಲೌಟ್​​ ಆಯ್ತು. ​35 ರನ್​ಗಳ ಅಂತರದ ಜಯ ಸಾಧಿಸಿ ಟೀಮ್​ಇಂಡಿಯಾ ಗೆಲುವಿನ ಕೇಕೆ ಹಾಕಿತು. ಭಾರತದ ಪರ ಯಜುವೇಂದ್ರ ಚಹಲ್ 3, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ 2, ಭುವನೇಶ್ವರ್ ಕುಮಾರ್​, ಕೇದಾರ್ ಜಾಧವ್ ತಲಾ 1 ವಿಕೆಟ್ ಪಡೆದರು. ಭರ್ಜರಿ ಬ್ಯಾಟಿಂಗ್​ ಮಾಡಿ 90 ರನ್​ ಸಿಡಿಸಿದ ಅಂಬಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ್ರು. ಟೂರ್ನಿಯಲ್ಲಿ ಅತ್ಯುತ್ತಮ ಪದರ್ಶನ ನೀಡಿದ ಮೊಹಮ್ಮದ್ ಶಮಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ್ರು. 

LEAVE A REPLY

Please enter your comment!
Please enter your name here