ಮೆಲ್ಬೋರ್ನ್ : ಮಹಿಳಾ ಟಿ20 ವಿಶ್ವಕಪ್ ಫೈನಲ್ನಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಮೆಗ್ ಲ್ಯಾನಿಂಗ್ ಮುಂದಾಳತ್ವದ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ಉತ್ಸಾಹದಲ್ಲಿದ್ದ ಭಾರತವನ್ನು 85ರನ್ಗಳಿಂದ ಸೋಲಿಸಿದ ಆಸೀಸ್ 5ನೇ ಹಾಗೂ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಎಲಿಸಾ ಹೀಲಿ ( 75) ಮತ್ತು ಬೆತ್ ಮೂನಿ (ಅಜೇಯ 78)ರನ್ಗಳ ಆಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184ರನ್ ಮಾಡಿತು. ಆರಂಭಿಕ ಈ ಜೋಡಿ ಮೊದಲ ವಿಕೆಟ್ಗೆ 115ರನ್ ಜೊತೆಯಾಟ ಆಡಿ ಭಾರತೀಯ ಬೌಲರ್ಗಳನ್ನು ಕಾಡಿದ್ರು.
ಗುರಿ ಬೆನ್ನತ್ತಿದ ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿಶರ್ಮಾ (33), ಕನ್ನಡತಿ ವೇದಾಕೃಷ್ಣಮೂರ್ತಿ (19) ಮತ್ತು ರಿಚಘೋಷ್ (18) ಬಿಟ್ರೆ ಬೇರೆ ಯಾರೂ ಸ್ವಲ್ಪಮಟ್ಟಿಗೆ ಹೋರಾಟ ತೋರಿದ್ದು ಬಿಟ್ಟರೆ ಬೇರ್ಯಾರು ಉತ್ತಮ ಆಟ ಆಡಲಿಲ್ಲ. ಅಂತಿಮವಾಗಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಆಲ್ಔಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿದ್ರು.
ಚೊಚ್ಚಲ ಮಹಿಳಾ ಟಿ20 ವರ್ಲ್ಡ್ಕಪ್ ಗೆಲ್ಲುವ ಕನಸು ಭಗ್ನ!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on