ವಿಶಾಖಪಟ್ಟಣ : ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 2ನೇ ಒಡಿಐನಲ್ಲಿ ಭರ್ಜರಿ ಜಯ ದಾಖಲಿಸಿ, ಮೊದಲ ಮ್ಯಾಚ್ನ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಇಲ್ಲಿನ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್ನಲ್ಲಿ ವಿರಾಟ್ ಪಡೆ 107ರನ್ಗಳ ಅಧಿಕಾರಯುತ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ( 159) ಮತ್ತು ಕನ್ನಡಿಗ ಕೆ.ಎಲ್ ರಾಹುಲ್ (102) ದ್ವಿಶತಕದ ಜೊತೆಯಾಟ ಹಾಗೂ ಶ್ರೇಯಸ್ ಅಯ್ಯರ್ (53) ಮತ್ತು ರಿಷಭ್ ಪಂತ್ (39) ಹೊಡಿಬಡಿ ಆಟದ ನೆರವಿನಿಂದ 387ರನ್ಗಳ ಬೃಹತ್ ಮೊತ್ತ ಪೇರಿಸಿತು.
ಗುರಿ ಬೆನ್ನತ್ತಿದ ಪ್ರವಾಸಿ ವಿಂಡೀಸ್ ಉತ್ತಮ ಆರಂಭವನ್ನು ಪಡೆದರೂ ಗೆಲುವಿನ ದಡ ಸೇರಲಾಗಲಿಲ್ಲ. ಶಾಯ್ ಹೋಪ್ (78) ಮತ್ತು ನಿಕೋಲಾಸ್ ಪೂರನ್ (75) ಹೊರತುಪಡಿಸಿ ವಿಂಡೀಸ್ನ ಯಾವ ಬ್ಯಾಟ್ಸ್ಮನ್ಗಳು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಕುಲ್ದೀಪ್ ಯಾದವ್ (3 ವಿಕೆಟ್), ಮಹಮ್ಮದ್ ಶಮಿ (3 ವಿಕೆಟ್) ರವೀಂದ್ರ ಜಡೇಜಾ (2 ವಿಕೆಟ್) ಮತ್ತು ಶಾರ್ದೂಲ್ ಠಾಕೂರ್ (1 ವಿಕೆಟ್) ದಾಳಿಗೆ ತತ್ತರಿಸಿ ಇನ್ನೂ 6.3 ಓವರ್ ಬಾಕಿ ಇರುವಾಗಲೇ 280ರನ್ಗಳಿಗೆ ಆಲೌಟ್ ಆಯಿತು.
ರೋಹಿತ್, ರಾಹುಲ್ ಸೆಂಚುರಿ ; ಅಯ್ಯರ್, ಪಂತ್ ಅಬ್ಬರ : ವಿಂಡೀಸ್ಗೆ ಬಿಗ್ ಟಾರ್ಗೆಟ್!