ಹೊಸವರ್ಷದಂದು ಮಗು ಜನಿಸಬೇಕು ಎಂಬುದು ಬಹುತೇಕ ಪೋಷಕರ ಆಸೆಯಾಗಿರುತ್ತೆ. ಇದಕ್ಕಾಗಿ ಆ ದಿನವೇ ಹೆರಿಗೆ ಮಾಡಿಸಿಕೊಳ್ಳುವುದು ಉಂಟು. ಹೆರಿಗೆಗೆ ಮುಹೂರ್ತ ನೋಡುವುದು ಕೂಡ ಕಾಮನ್ ಅಗಿಬಿಟ್ಟಿದೆ. ಮಕ್ಕಳ ಜನನದ ವಿಚಾರದಲ್ಲಿ ಭಾರತ 2020ರ ಮೊದಲ ದಿನವೇ ವಿಶ್ವದಾಖಲೆ ಬರೆದಿದೆ.
2020 ರ ಜನವರಿ 1 ರಂದು ಭಾರತದಲ್ಲಿ ಸುಮಾರು 67,385 ಮಕ್ಕಳು ಜನಿಸಿದ್ದಾರೆ. ವಿಶ್ವದಲ್ಲೇ ಅತ್ಯಧಿಕ ಮಕ್ಕಳ ಜನನ ಭಾರತದಲ್ಲಾಗಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಕ್ಕಳ ನಿಧಿ ವರದಿಯ ಪ್ರಕಾರ ಚೀನಾ 2ನೇ ಸ್ಥಾನದಲ್ಲಿದ್ದು 46 ಸಾವಿರ ಮಕ್ಕಳು ಜನಿಸಿದ್ದಾರೆ. ನೈಜೀರಿಯಾದಲ್ಲಿ 26 ಸಾವಿರ ಮಕ್ಕಳು, ಪಾಕಿಸ್ತಾನದಲ್ಲಿ 16 ಸಾವಿರ , ಅಮೆರಿಕಾದಲ್ಲಿ 10 ಸಾವಿರ ಮಕ್ಕಳು ಜನಿಸಿದ್ದಾರೆ. ಒಟ್ಟಾರೆ ವಿಶ್ವದಲ್ಲಿ ಹೊಸ ವರ್ಷದಂದು 3,92,078 ಮಕ್ಕಳ ಜನನವಾಗಿದೆ. ಇದರಲ್ಲಿ ಭಾರತದ ಪಾಲು ಶೇ 17ರಷ್ಟಿದೆ.