Friday, October 7, 2022
Powertv Logo
Homeವಿದೇಶರೋಹಿತ್, ರಾಹುಲ್ ಸೆಂಚುರಿ ; ಅಯ್ಯರ್, ಪಂತ್ ಅಬ್ಬರ : ವಿಂಡೀಸ್​ಗೆ ಬಿಗ್ ಟಾರ್ಗೆಟ್!

ರೋಹಿತ್, ರಾಹುಲ್ ಸೆಂಚುರಿ ; ಅಯ್ಯರ್, ಪಂತ್ ಅಬ್ಬರ : ವಿಂಡೀಸ್​ಗೆ ಬಿಗ್ ಟಾರ್ಗೆಟ್!

ವಿಶಾಖಪಟ್ಟಣ : ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಭರ್ಜರಿ ಸೆಂಚುರಿ, ಯುವ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅಬ್ಬರದಿಂದ ಟೀಮ್ ಇಂಡಿಯಾ ಪ್ರವಾಸಿ ವೆಸ್ಟ್​ ಇಂಡೀಸ್​ಗೆ 388ರನ್​ಗಳ ಬೃಹತ್ ಗುರಿ ನೀಡಿದೆ.
ಎರಡನೇ ಒಡಿಐನಲ್ಲಿ ಟಾಸ್​ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್​ಗೆ ಇಳಿಸಿದ ವೆಸ್ಟ್​ ಇಂಡೀಸ್ ಶರ್ಮಾ ಮತ್ತು ರಾಹುಲ್ ಆರ್ಭಟಕ್ಕೆ ನಲುಗಿತು. ರೋಹಿತ್ ಶರ್ಮಾ (159) 28ನೇ ಒಡಿಐ ಸೆಂಚುರಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ 3ನೇ ಒಡಿಐ ಸೆಂಚುರಿ ಬಾರಿಸಿದ್ರು. ರೋಹಿತ್ , ರಾಹುಲ್ ಜೊತೆಯಾಟವನ್ನು ಬೇರ್ಪಡಿಸಲು ಕೆರಬಿಯನ್ನರು ಪರದಾಡಿದರು. ತಂಡದ ಮೊತ್ತ 227ರನ್ ಆಗಿದ್ದಾಗ ಮೊದಲ ವಿಕೆಟ್ ರೂಪದಲ್ಲಿ ರಾಹುಲ್ ಔಟಾದರು.

ಒನ್​ಡೌನ್ ಬಂದ ಕ್ಯಾಪ್ಟನ್ ಕೊಹ್ಲಿ ತಾವು ಎದುರಿಸಿದ ಮೊದಲ ಬಾಲ್​ನಲ್ಲೇ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ ತಂಡದ ಮೊತ್ತ 292ರನ್ ಆಗಿದ್ದಾಗ ಔಟಾದ್ರು. ನಂತರ ಶುರುವಾಗಿದ್ದೇ ಯುವ ಆಟಗಾರರ ಬ್ಯಾಟಿಂಗ್ ವೈಭವ!


ಪಂತ್ – ಅಯ್ಯರ್ ಅಬ್ಬರ : ರೋಹಿತ್ ಔಟಾದ ಬಳಿಕ ಅಂತಿಮ ಓವರ್ ಗಳಲ್ಲಿ ಯುವ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅಬ್ಬರಿಸಿದರು. ಕಳೆದ ಮ್ಯಾಚಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದ ರಿಷಭ್ ಇಂದು ಕೇವಲ 16 ಬಾಲ್​ಗಳಲ್ಲಿ 39ರನ್ ಬಾರಿಸಿ ತನ್ನ ವಿರುದ್ಧ ಕೇಳಿ ಬರುತ್ತಿದ್ದ ಟೀಕೆಗಳಿಗೆ ಉತ್ತರಿಸಿದರು. ಶ್ರೇಯಸ್ ಅಯ್ಯರ್ 32 ಬಾಲ್​ಗಳಲ್ಲಿ 53ರನ್ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಕೇದರ್ ಜಾದವ್ 10 ಬಾಲ್​ಗಳಲ್ಲಿ 16ರನ್ ಮಾಡಿ ಬೃಹತ್ ಮೊತ್ತಕ್ಕೆ ನೆರವಾದರು.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments