ಇಂದೋರ್ : ಭಾರತ ಮತ್ತು ಪ್ರವಾಸಿ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಗುವಾಹಟಿಯಲ್ಲಿ ನಡೆಯಬೇಕಿದ್ದ ಮೊದಲ ಮ್ಯಾಚ್ ಮಳೆಯ ಕಾರಣ ರದ್ದಾಗಿತ್ತು. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ಚೊಚ್ಚಲ ಗೆಲುವಿನೊಂದಿಗೆ ಮುನ್ನಡೆ ಕಾಯ್ದುಕೊಳ್ಳುವ ತವಕದಲ್ಲಿ ಎರಡೂ ತಂಡಗಳಿವೆ.
ಕೊಹ್ಲಿಗೆ ವರ್ಲ್ಡ್ ರೆಕಾರ್ಡ್ಗೆ ಬೇಕು 1 ರನ್ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮತ್ತೊಂದು ವರ್ಲ್ಡ್ ರೆಕಾರ್ಡ್ಗೆ ರೆಡಿಯಾಗಿದ್ದಾರೆ. ಕೊಹ್ಲಿ ವಿಶ್ವ ದಾಖಲೆಗೆ ಬೇಕಿರುವುದು ಕೇವಲ ಒಂದೇ ಒಂದು ರನ್! ಟಿ20ಯಲ್ಲಿ ರನ್ಮಷಿನ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ರೋಹಿತ್ ಶರ್ಮಾ ತಲಾ 2,633ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶರ್ಮಾ 104 ಮ್ಯಾಚ್ಗಳಲ್ಲಿ, ಕೊಹ್ಲಿ 75 ಮ್ಯಾಚ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇಂದಿನ ಮ್ಯಾಚಲ್ಲಿ ವಿರಾಟ್ ಶರ್ಮಾ ಅವರನ್ನು ಓವರ್ ಟೇಕ್ ಮಾಡಿ ನಂಬರ್ 1 ಸ್ಥಾನ ಅಲಂಕರಿಸುವುದು ಬಹುತೇಕ ಕನ್ಫರ್ಮ್! ರೋಹಿತ್ ಲಂಕಾ ವಿರುದ್ಧದ ಟೂರ್ನಿಯಿಂದ ವಿಶ್ರಾಂತಿ ಪಡೆದಿರೋದ್ರಿಂದ ಸದ್ಯದ ಮಟ್ಟಿಗೆ ಕ್ಯಾಪ್ಟನ್ ಕೊಹ್ಲಿ ನಂತರದ ಸ್ಥಾನಕ್ಕೆ ತೃಪ್ತಿ ಪಡಬೇಕಾಗುತ್ತದೆ.
ಭಾರತಕ್ಕೆ ಕೊಹ್ಲಿ ಅಲ್ಲದೆ ಕನ್ನಡಿಗ ಕೆ.ಎಲ್ ರಾಹುಲ್, ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್, ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ಬ್ಯಾಟಿಂಗ್ ಬಲವಾಗಿದ್ದಾರೆ. ಜಸ್ಪ್ರೀತ್ ಬೂಮ್ರಾ, ಕುಲ್ದೀಪ್ ಯಾದವ್ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅವರಿಗೆ ಯುವ ಬೌಲರ್ ನವದೀಪ್ ಸೈನಿ ಮೇಲೆ ನಿರೀಕ್ಷೆ ಭಾರವಿದೆ.
ಲಂಕಾಗೆ ಕ್ಯಾಪ್ಟನ್ ಲಸಿತ್ ಮಲಿಂಗ, ಇಸರು ಉದನ, ಧನಂಜಯ ಡಿ ಸಿಲ್ವಾ ಮತ್ತಿತರ ಸ್ಟಾರ್ ಆಟಗಾರರ ಬಲವಿದ್ದು, ಇಂದೋರ್ ವಾರ್ ಅಭಿಮಾನಿಗಳಿಗೆ ರಸದೌತಣ ನೀಡೋದ್ರಲ್ಲಿ ಡೌಟಿಲ್ಲ.
ಇಂದೋರ್ ವಾರ್ಗೆ ಕೌಂಟ್ಡೌನ್..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on