Friday, October 7, 2022
Powertv Logo
Homeವಿದೇಶಕ್ಯಾಪ್ಟನ್​ ಕೊಹ್ಲಿ ವರ್ಲ್ಡ್​ ರೆಕಾರ್ಡ್​ಗೆ ಬೇಕಿದೆ ಕೇವಲ ಒಂದೇ ಒಂದು ರನ್ !

ಕ್ಯಾಪ್ಟನ್​ ಕೊಹ್ಲಿ ವರ್ಲ್ಡ್​ ರೆಕಾರ್ಡ್​ಗೆ ಬೇಕಿದೆ ಕೇವಲ ಒಂದೇ ಒಂದು ರನ್ !

ಗುವಾಹಟಿ : ಭಾರತ ಮತ್ತು ಪ್ರವಾಸಿ ಶ್ರೀಲಂಕಾ ನಡುವೆ ಇಂದು ಮೂರು ಮ್ಯಾಚ್​ಗಳ ಟಿ20 ಸರಣಿಯ ಮೊದಲ ಮ್ಯಾಚ್​ ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ ನಡೆಯಲಿದೆ. ಟೀಮ್ ಇಂಡಿಯಾಕ್ಕೆ 2020 ವರ್ಷದ ಮೊದಲ ಪಂದ್ಯ ಇದಾಗಿದ್ದು, ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವರ್ಲ್ಡ್​​ ರೆಕಾರ್ಡ್ ಮಾಡಲು ರೆಡಿಯಾಗಿದ್ದಾರೆ. ಒಂದೇ ಒಂದು ರನ್ ಮಾಡಿದ್ರೆ ಸಾಕು ವಿರಾಟ್ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರಲಿದೆ.
ಸದ್ಯ ಟಿ20ಯಲ್ಲಿ ಕ್ಯಾಪ್ಟನ್ ಕೊಹ್ಲಿ ಹಾಗೂ ಹಿಟ್​​ಮ್ಯಾನ್​ ರೋಹಿತ್ ಶರ್ಮಾ ತಲಾ 2,633ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶರ್ಮಾ 104 ಮ್ಯಾಚ್​ಗಳಲ್ಲಿ, ಕೊಹ್ಲಿ 75 ಮ್ಯಾಚ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇಂದಿನ ಮ್ಯಾಚಲ್ಲಿ ವಿರಾಟ್ ಶರ್ಮಾ ಅವರನ್ನು ಓವರ್ ಟೇಕ್​ ಮಾಡಿ ನಂಬರ್ 1 ಸ್ಥಾನ ಅಲಂಕರಿಸುವುದು ಬಹುತೇಕ ಕನ್ಫರ್ಮ್! ರೋಹಿತ್ ಲಂಕಾ ವಿರುದ್ಧದ ಟೂರ್ನಿಯಿಂದ ವಿಶ್ರಾಂತಿ ಪಡೆದಿರೋದ್ರಿಂದ ಸದ್ಯದ ಮಟ್ಟಿಗೆ ಕ್ಯಾಪ್ಟನ್​ ಕೊಹ್ಲಿ ನಂತರದ ಸ್ಥಾನಕ್ಕೆ ತೃಪ್ತಿ ಪಡಬೇಕಾಗುವುದು ಅನಿವಾರ್ಯವಾಗಿದೆ.
ಇನ್ನು ಇದುವರೆಗೆ ಭಾರತ – ಲಂಕಾ ಟಿ20ಯಲ್ಲಿ 16 ಮ್ಯಾಚ್​ಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ 11 ಬಾರಿ ಭಾರತ ಗೆದ್ದಿದ್ದು, ಶ್ರೀಲಂಕಾ ಕೇವಲ 7 ಬಾರಿ ಗೆಲುವಿನ ನಗೆ ಬೀರಿದೆ. ಇಂದಿನ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

 

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments