ಛೇ.. ಡಬಲ್ ಸೆಂಚುರಿ ಬೆನ್ನಲ್ಲೇ ರೋಹಿತ್​ ಔಟ್!

0
566

ಛೇ ಡಬಲ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಹಿಟ್ ಮ್ಯಾನ್ ರೋಹಿತ್ ಶರ್ಮಾ ಔಟಾಗಿದ್ದಾರೆ. ರಾಂಚಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮ್ಯಾಚಿನಲ್ಲಿ (212)ರನ್ ಬಾರಿಸಿದ ರೋಹಿತ್ ಶರ್ಮಾ ಲುಂಗಿ ನೆಗಿಡಿ ಬೌಲಿಂಗ್​ನಲ್ಲಿ ರಬಡಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ.
ನಿನ್ನೆಯಿಂದ ಆರಂಭವಾಗಿರುವ ಟೆಸ್ಟ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಭಾರತ ಶರ್ಮಾ ದ್ವಿಶತಕ (212) ಮತ್ತು ಅಜಿಂಕ್ಯಾ ರಹಾನೆ (115) ಆಟದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕುತ್ತಿದೆ. ಸದ್ಯ 5 ವಿಕೆಟ್ ನಷ್ಟಕ್ಕೆ 375ರನ್ ಆಗಿದ್ದು, ಆಲ್​ ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಹಿಟ್​ಮ್ಯಾನ್ ರೋಹಿತ್ ಮತ್ತೊಂದು ಡಬಲ್ ಸೆಂಚುರಿ!

LEAVE A REPLY

Please enter your comment!
Please enter your name here