ಕಿಂಗ್ ಕೊಹ್ಲಿ ಡಬಲ್ ಸೆಂಚುರಿ… ಟೀಮ್ ಇಂಡಿಯಾ ಕ್ಯಾಪ್ಟನ್ ಮತ್ತೊಂದು ರೆಕಾರ್ಡ್​..!

0
127

ಪುಣೆ : ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಬ್ಯಾಟ್​ ಹಿಡಿದು ಕ್ರೀಸ್​ನಲ್ಲಿ ನಿಂತ್ರು ಅಂದ್ರೆ ಸಾಕು ರನ್​ ಮಳೆ ಗ್ಯಾರೆಂಟಿ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಶಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್​ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​​​ ಮ್ಯಾಚ್​ನಲ್ಲೂ ಕೊಹ್ಲಿ ರನ್​ ಮಳೆ ಸುರಿಸುತ್ತಿದ್ದಾರೆ. ಮೊದಲ ಇನ್ನಿಂಗ್ಸ್​​​ನಲ್ಲಿ ಕೊಹ್ಲಿ ಡಬಲ್ ಸೆಂಚುರಿ (ಅ.254) ಸಿಡಿಸಿದ್ದಾರೆ.
ಈ ಡಬಲ್​​ ಸೆಂಚುರಿಯೊಂದಿಗೆ ಟೆಸ್ಟ್​​ನಲ್ಲಿ 7 ಡಬಲ್ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್​ನಲ್ಲಿ ಕೊಹ್ಲಿ 7ಸಾವಿರರನ್​ ಗಡಿ ದಾಟಿದ್ದಾರೆ. 

ಇನ್ನು ಭಾರತ 5 ವಿಕೆಟ್​ ನಷ್ಟಕ್ಕೆ 601ರನ್ ಮಾಡಿ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಂಡಿದೆ. ಕೊಹ್ಲಿ ಮಾತ್ರವಲ್ಲದೆ ಕನ್ನಡಿಗ ಮಯಾಂಕ್ ಅಗರ್​ವಾಲ್ (108), ಚೇತೇಶ್ವರ ಪೂಜಾರ (58), ಅಜಿಂಕ್ಯಾ ರಹಾನೆ (59) ಹಾಗೂ ರವೀಂದ್ರ ಜಡೇಜಾ (91) ಉತ್ತಮ ಆಟವಾಡಿದರು. ರೋಹಿತ್ ಶರ್ಮಾ (14) ಮಾತ್ರ ನಿರಾಸೆ ಮೂಡಿಸಿದರು.

LEAVE A REPLY

Please enter your comment!
Please enter your name here