ಟೀಮ್ ಇಂಡಿಯಾ ವಿರುದ್ಧ ‘ಸೋತಾ’ಫ್ರಿಕಾ..!

0
336

ವಿಶಾಖಪಟ್ಟಣ : ಟೀಮ್ ಇಂಡಿಯಾ ತನ್ನ ಸಂಘಟಿತ ಹೋರಾಟದಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​​ನಲ್ಲಿ 203ರನ್​ಗಳಿಂದ ಗೆದ್ದು ಬೀಗಿದೆ.
ವಿಶಾಖಪಟ್ಟಣದ ಡಾ.ವೈಎಸ್​ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್​ನಲ್ಲಿ ಐದನೇ ಹಾಗೂ ಕೊನೆಯ ದಿನವಾದ ಇಂದು ಮೊಹಮ್ಮದ್​ ಶಮಿ ಮತ್ತು ರವೀಂದ್ರ ಜಡೇಜ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪೆರೇಡ್ ಮಾಡಿದ್ರು.
ಮೊದಲ ಇನ್ನಿಂಗ್ಸ್​ನಲ್ಲಿ ಕನ್ನಡಿಗ ಮಯಾಂಕ್ ಅಗರ್​ವಾಲ್​ (215) ದ್ವಿಶತಕ ಮತ್ತು ರೋಹಿತ್ ಶರ್ಮಾ (176) ಶತಕದ ನೆರವಿನಿಂದ ಭಾರತ 502ರನ್ ಮಾಡಿತ್ತು. ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ 431ರನ್​ಗಳಿಗೆ ಆಲೌಟ್ ಆಗಿತ್ತು. ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ ರೋಹಿತ್ ಶರ್ಮಾ (127), ಚೇತೇಶ್ವರ ಪೂಜಾರ (81) ಆಟದ ನೆರವಿನಿಂದ 323ರನ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 395ರನ್​ ಗುರಿ ನೀಡಿತ್ತು. ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ 191ರನ್​ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

LEAVE A REPLY

Please enter your comment!
Please enter your name here