ಹರಿಣಗಳ ಮೇಲೆ ರೋಹಿತ್​, ಕನ್ನಡಿಗ ಮಯಾಂಕ್​ ಸವಾರಿ..!

0
381

ವಿಶಾಖಪಟ್ಟಣ : ಪ್ರವಾಸಿ ಸೌತ್​ಆಫ್ರಿಕಾ ವಿರುದ್ಧ ಹಿಟ್​​​ಮ್ಯಾನ್ ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್​ ಅಗರ್​ವಾಲ್​ ಸವಾರಿ ಮಾಡಿದ್ದಾರೆ.
ಡಾ. ವೈ.ಎಸ್​ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿರುವ ಮೊದಲ ಟೆಸ್ಟ್ ಮ್ಯಾಚ್​ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಕ್ಯಾಪ್ಟನ್ ನಿರ್ಧಾರವನ್ನು ಸಮರ್ಥಿಸಿಕೊಂಡ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್​ವಾಲ್ ಪ್ರವಾಸಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಇನ್ನೋರ್ವ ಕನ್ನಡಿಗ ಕೆ.ಎಲ್ ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವುದಲ್ಲದೆ, ಓಪನಿಂಗ್ ಹೊಣೆ ಹೊತ್ತಿರುವ ರೋಹಿತ್ ಶರ್ಮಾ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 169 ಬಾಲ್​ಗಳಲ್ಲಿ ಶರ್ಮಾ 10 ಫೋರ್ ಹಾಗೂ 5 ಸಿಕ್ಸರ್​ ಮೂಲಕ 107ರನ್​ ಮಾಡಿ ಆಟ ಮುಂದುವರೆಸಿದ್ದಾರೆ. ರೋಹಿತ್​ ಗೆ ಸಮರ್ಥ ಸಾಥ್​ ನೀಡಿರುವ ಕನ್ನಡಿಗ ಮಯಾಂಕ್ ಅಗರ್​ವಾಲ್​ 177 ಬಾಲ್​ ಗಳಲ್ಲಿ 2 ಸಿಕ್ಸರ್​ ಮತ್ತು 10 ಫೋರ್ ಮೂಲಕ 80ನ್​ ಮಾಡಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಭಾರತ 56 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 190ರನ್​​ಗಳಿಸಿ ಆಡುತ್ತಿದೆ.

LEAVE A REPLY

Please enter your comment!
Please enter your name here