Tuesday, September 27, 2022
Powertv Logo
Homeಕ್ರೀಡೆಮತ್ತೆ ನ್ಯೂಜಿಲೆಂಡ್ ಕಾಡಿದ ಕನ್ನಡಿಗ ರಾಹುಲ್, ಅಯ್ಯರ್ ! 2ನೇ ಟಿ20ಯಲ್ಲೂ ಗೆದ್ದು ಬೀಗಿದ ಭಾರತ

ಮತ್ತೆ ನ್ಯೂಜಿಲೆಂಡ್ ಕಾಡಿದ ಕನ್ನಡಿಗ ರಾಹುಲ್, ಅಯ್ಯರ್ ! 2ನೇ ಟಿ20ಯಲ್ಲೂ ಗೆದ್ದು ಬೀಗಿದ ಭಾರತ

ಆಕ್ಲೆಂಡ್ : ಕನ್ನಡಿಗ ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲೂ 7 ವಿಕೆಟ್ ಭರ್ಜರಿ ಜಯ ದಾಖಲಿಸಿದೆ.

ಈಡನ್ ಪಾರ್ಕ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್  ಆಯ್ದುಕೊಂಡ ನ್ಯೂಜಿಲೆಂಡ್ ಭಾರತದ ಸಂಘಟಿತ ದಾಳಿಗೆ ತತ್ತರಿಸಿತು.  ಆರಂಭದ 5 ಓವರ್ ಗಳಲ್ಲಿ ಕಿವೀಸ್ ವಿಕೆಟ್ ನಷ್ಟವಿಲ್ಲದೆ 48 ರನ್ ಬಾರಿಸಿತ್ತು. ಆದರೆ, 6ನೇ ಓವರ್ನ  ಕೊನೆಯ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್​ಮೆನ್ ಮಾರ್ಟಿನ್ ಗಪ್ಟಿಲ್ (19 ಎಸೆತಗಳಲ್ಲಿ 33 ರನ್) ದೊಡ್ಡ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಯುವ ವೇಗಿ ಶಾರ್ದೂಲ್ ಠಾಕೂರ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಬಳಿಕ ಎಲ್ಲಿಯೂ ಪುಟಿದೇಳುವ ಅವಕಾಶ ನೀಡದೆ ಕರಾರುವಕ್ ಬೌಲಿಂಗ್  ನಡೆಸಿದ ವಿರಾಟ್ ಪಡೆ, 20 ಓವರ್ ಗಳಲ್ಲಿ  132 ರನ್ ಗಳಿಗೆ ಕಟ್ಟಿಹಾಕಿತು. ಕಿವೀಸ್ ಕಳೆದುಕೊಂಡಿದ್ದು 5 ವಿಕೆಟ್ ಮಾತ್ರವಾದರೂ  ಹೆಚ್ಚಿನ ರನ್ ಮಾಡಲು ಆಗಲಿಲ್ಲ.

ಮಾರ್ಟಿನ್ ಗಪ್ಟಿಲ್ (33), ಕಾಲಿನ್ ಮನ್ರೋ (26) ಮತ್ತು ವಿಕೆಟ್ ಕೀಪರ್ ಟಿಮ್ ಸೀಫರ್ಟ್ (ಔಟಾಗದೆ 33) ಕೊಡುಗೆ ನೀಡಿದರು.

ಭಾರತದ ಪರ ರವೀಂದ್ರ ಜಡೇಜ 2 ವಿಕೆಟ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

ನಂತರ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 8 ರನ್ ಗಳಿಸಿ ರೋಹಿತ್ ಶರ್ಮಾ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸಿಗಿಳಿದ ನಾಯಕ ವಿರಾಟ್ ಕೋಹ್ಲಿಯೂ ನಿರೀಕ್ಷಿತ  ಪ್ರದರ್ಶನ ನೀಡಲಿಲ್ಲ.  ಶ್ರೇಯಸ್ ಅಯ್ಯರ್ ಜೊತೆಗೂಡಿ ಜವಾಬ್ದಾರಿಯುತ ಆಟವಾಡಿದ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್  ಅರ್ಧ ಶತಕ (ಔಟಾಗದೆ 57)  ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಭಾರತ ಇನ್ನು 2.3 ಓವರ್ ಗಳು ಬಾಕಿ ಇರುವಂತೆಯೇ  ಗೆಲುವಿನ ನಗೆ ಬೀರುತು.

ರಾಹುಲ್ (57) ಅಂತೆಯೇ ಶ್ರೇಯಸ್ ಅಯ್ಯರ್ ( 44) ಕಳೆದ ಮ್ಯಾಚಂತೆ ಈ ಮ್ಯಾಚಲ್ಲೂ ಮಿಂಚಿದ್ರು.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments