Home ಕ್ರೀಡೆ P.Cricket 21 ವರ್ಷಗಳ ಹಿಂದೆ ರಾಹುಲ್​​ ದ್ರಾವಿಡ್ ಸಾಧಿಸಿದ್ದನ್ನು ಸಾಧಿಸಿದ ರಾಹುಲ್..!

21 ವರ್ಷಗಳ ಹಿಂದೆ ರಾಹುಲ್​​ ದ್ರಾವಿಡ್ ಸಾಧಿಸಿದ್ದನ್ನು ಸಾಧಿಸಿದ ರಾಹುಲ್..!

ಮೌಂಟ್ ಮಾಂಗ್ನುಯಿ : ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಕನ್ನಡಿಗ ರಾಹುಲ್ ದ್ರಾವಿಡ್​ ಹಾದಿಯಲ್ಲಿ ಸಾಗಿರುವ ಟೀಮ್ ಇಂಡಿಯಾದ ಯುವ ತಾರೆ ಕನ್ನಡಿಗ ಕೆ.ಎಲ್ ರಾಹುಲ್ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. 21 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಮಾಡಿದ ಸಾಧನೆಯನ್ನು ಇದೀಗ ಕನ್ನಡಿಗರೇಯಾದ ಕೆ.ಎಲ್ ರಾಹುಲ್ ಸಾಧಿಸಿದ್ದಾರೆ. 

ಮೌಂಟ್​ ಮಾಂಗ್ನುಯಿಯ ಬೇ ಓವೆಲ್​​ ಸ್ಟೇಡಿಯಂನಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿ ಕ್ಲೀನ್​ಸ್ವೀಪ್ ಮುಖಭಂಗ ಅನುಭವಿಸಿದ ಹೊರತಾಗಿ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ ಸಿಡಿಸಿ ಮಿಂಚಿದರೆನ್ನುವುದೇ ಸಮಾಧಾನ ಹಾಗೂ ಖುಷಿ ವಿಚಾರ. ಈ ಶತಕ ರಾಹುಲ್ ಪಾಲಿಗೆ ಮಾತ್ರವಲ್ಲದೆ ಟೀಮ್ ಇಂಡಿಯಾ ಪಾಲಿಗೂ ವಿಶೇಷ. ಈ ಸೆಂಚುರಿಯೊಂದಿಗೆ 21 ವರ್ಷಗಳ ಹಿಂದಿ ನಮ್ಮ ಕನ್ನಡಿಗರೇಯಾದ ರಾಹುಲ್ ದ್ರಾವಿಡ್ ಮಾಡಿದ್ದ ದಾಖಲೆಯನ್ನು ಕೆ.ಎಲ್ ರಾಹುಲ್ ಮಾಡಿದ್ದಾರೆ. ರಾಹುಲ್ ದ್ರಾವಿಡ್ ನಂತರ ಏಷ್ಯಾದ ಹೊರಗೆ ಶತಕಗಳಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

1999ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ವರ್ಲ್ಡ್​ಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಟೌಂಟೀನ್​​ನಲ್ಲಿ ನಡೆದಿದ್ದ ಪಂದ್ಯದಲ್ಲಿ ದ್ರಾವಿಡ್ (145) ಸೆಂಚುರಿ ಬಾರಿಸಿದ್ರು. ಆ ಮೂಲಕ ದ್ರಾವಿಡ್ ಏಷ್ಯಾದ ಹೊರಗಡೆ ಶತಕಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ – ಬ್ಯಾಟ್ಸ್​ಮನ್ ಎಂಬ ಕೀರ್ತಿಗೆ ಭಾಜನರಾಗಿದ್ರು. ಅಲ್ಲದೆ ದ್ರಾವಿಡ್​ಗೂ ಮೊದಲು, ದ್ರಾವಿಡ್ ನಂತರ ಕೂಡ ಯಾವೊಬ್ಬ ಭಾರತೀಯ ವಿಕೆಟ್​ ಕೀಪರ್ ಕೂಡ ಏಷ್ಯಾದ ಹೊರಗಡೆ ಸೆಂಚುರಿ ಸಿಡಿಸಿರಲಿಲ್ಲ. ಮಹೇಂದ್ರ ಸಿಂಗ್ ಧೋನಿ ಕೂಡ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ..!

ಇನ್ನು ದ್ರಾವಿಡ್ ಸೆಂಚುರಿಸಿ ಸಿಡಿಸಿದ್ದ ಆ ಪಂದ್ಯದಲ್ಲಿ ಸೌರವ್ ಗಂಗೂಲಿಗೂ ಭರ್ಜರಿ 183 ರನ್ ಸಿಡಿಸಿದ್ದರು! ದ್ರಾವಿಡ್ – ಗಂಗೂಲಿಯ ದಾಖಲೆಯ 323ರನ್​ ಜೊತೆಯಾಟದ ನೆರವಿನಿಂದ ಭಾರತ 373ರನ್ ಗುರಿ ನೀಡಿತ್ತು. ಲಂಕಾ ಕೇವಲ 216ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತ 157ರನ್​​ಗಳಿಂದ ಪಂದ್ಯ ಜಯಿಸಿತ್ತು.
ಇನ್ನು ರಾಹುಲ್ ದ್ರಾವಿಡ್ ನಂತರದಲ್ಲಿ ಏಷ್ಯಾದಿಂದ ಹೊರಗಡೆ ಶತಕ ಸಿಡಿಸಿದ ಎರಡನೇ ಭಾರತೀಯ ವಿಕೆಟ್​ ಕೀಪರ್ ಎಂಬ ಶ್ರೇಯಕ್ಕೆ ಕೆ.ಎಲ್ ರಾಹುಲ್ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಇಬ್ಬರೂ ನಮ್ಮ ಕನ್ನಡಿಗರೇ ಅನ್ನೋದು ನಿಜಕ್ಕೂ ಹೆಮ್ಮೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments