Sunday, May 29, 2022
Powertv Logo
Homeವಿದೇಶಮೊದಲ `ಟೆಸ್ಟ್​'ನಲ್ಲಿ ಕೊಹ್ಲಿ ಪಡೆ ಫೇಲ್ ; ಟೀಮ್ ಇಂಡಿಯಾ ಸೋಲಿಗೆ ಇವೇ ಕಾರಣ..!

ಮೊದಲ `ಟೆಸ್ಟ್​’ನಲ್ಲಿ ಕೊಹ್ಲಿ ಪಡೆ ಫೇಲ್ ; ಟೀಮ್ ಇಂಡಿಯಾ ಸೋಲಿಗೆ ಇವೇ ಕಾರಣ..!

ವೆಲ್ಲಿಂಗ್ಟನ್ : ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ. ವೆಲ್ಲಿಂಗ್ಟನ್​​ನಲ್ಲಿ ನಡೆದ ಮ್ಯಾಚನ್ನು 10 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಅತಿಥೇಯ ನ್ಯೂಜಿಲೆಂಡ್ 1-0 ಅಂತರದಲ್ಲಿ ಸರಣಿ ಮುನ್ನಡೆ ಕಾಯ್ದುಕೊಂಡಿದೆ.
ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 165 ರನ್​​ಗಳಿಗೆ ಆಲ್​ಔಟ್ ಆದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲೂ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಸಂಪೂರ್ಣ ಎಡವಿತು. ನ್ಯೂಜಿಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 348ರನ್ ಮಾಡಿ 183ರನ್​​ಗಳ ಮುನ್ನಡೆ ಕಾಯ್ದಿರಿಸಿಕೊಂಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಕೇವಲ 191ರನ್ ಗಳಿಸಷ್ಟೇ ಶಕ್ತವಾಯಿತು. ಕೇವಲ 8 ರನ್ ಗುರಿ ಬೆನ್ನತ್ತಿದ ಕಿವೀಸ್ ವಿಕೆಟ್​ ನಷ್ಟವಿಲ್ಲದೆ ಜಯ ದಾಖಲಿಸಿತು.
ಭಾರತದ ಸೋಲಿಗೆ ಕಾರಣ :
ಟಾಸ್​​ ಸೋಲು : ಭಾರತ ತಂಡದ ಸೋಲು ಟಾಸ್​ ಸೋಲಿನೊಂದಿಗೆ ಶುರುವಾಯ್ತು ಅಂದ್ರೆ ತಪ್ಪಾಗಲಾರದು. ವೆಲ್ಲಿಂಗ್ಟನ್​ನ ಗ್ರೀನ್​ ಟ್ರ್ಯಾಕಲ್ಲಿ ಕೊಹ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ರೆ ಫಲಿತಾಂಶ ಉಲ್ಟಾ ಆಗುವ ಸಾಧ್ಯತೆ ಹೆಚ್ಚಿತ್ತು.
ಬ್ಯಾಟಿಂಗ್​​​ ವೈಫಲ್ಯ : ಯುವ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತು ಕನ್ನಡಿಗ ಮಯಾಂಕ್ ಅಗರ್​ವಾಲ್​​ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದರು. ಆದರೆ ಎರಡೂ ಇನ್ನಿಂಗ್ಸ್​ಗಳಲ್ಲಿ ಉತ್ತಮ ಜೊತೆಯಾಟ ಇವರಿಂದ ಬರಲೇ ಇಲ್ಲ. ಅಲ್ಲದೆ ಕ್ಯಾಪ್ಟನ್​ ಕೊಹ್ಲಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರಾ ಸೇರಿದಂತೆ ಎಲ್ಲಾ ಬ್ಯಾಟ್ಸ್​ಮನ್​​ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಅಜಿಂಕ್ಯಾ ರಹಾನೆ 46 ರನ್ ಮಾಡಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ ಕನ್ನಡಿಗ ಮಯಾಂಕ್ ಅಗರ್​ವಾಲ್ ಬಾರಿಸಿದ 58ರನ್ನೇ ಭಾರತದ ಪರ ಉತ್ತಮ ರನ್​​!
‘ಟೆಸ್ಟ್​’ನಲ್ಲೂ ಪಂತ್ ಫೇಲ್ : ಮಹೇಂದ್ರ ಸಿಂಗ್ ಧೋನಿ ಬಳಿಕ ಟೀಮ್ ಇಂಡಿಯಾದ ಖಾಯಂ ವಿಕೆಟ್​​ ಕೀಪರ್ ಎಂದೇ ಕರೆಯಲ್ಪಟ್ಟ. ಆ ನಿಟ್ಟಿನಲ್ಲಿ ಸಾಕಷ್ಟು ಅವಕಾಶ ಪಡೆಯುತ್ತಿರುವ ರಿಷಭ್​ ಪಂತ್​​ ‘ಟೆಸ್ಟ್​’ನಲ್ಲೂ ಫೇಲ್​​ ಆದರು. ಸೀಮಿತ ಓವರ್​ಗಳ ಫಾರ್ಮೆಟ್​ನಲ್ಲಿ ಕಂಡುಬಂದ ಪಂತ್ ವೈಫಲ್ಯ ಟೆಸ್ಟಲ್ಲೂ ಮುಂದುವರೆದಿದೆ.
ಲಯ ಕಳೆದುಕೊಂಡಿರುವ ಬೂಮ್ರಾ : ಸ್ಟಾರ್​ ಬೌಲರ್ ಜಸ್ಪ್ರೀತ್ ಬೂಮ್ರಾ ಎರಡೂ ಇನ್ನಿಂಗ್ಸ್​​​ನಲ್ಲೂ ವೈಫಲ್ಯ ಅನುಭವಿಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 88ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್​ನಲ್ಲಿ ಕಿವೀಸ್​ಗೆ ಬೇಕಾಗಿದ್ದು ಕೇವಲ 9ರನ್ ಆಗಿದ್ರಿಂದ ಬುಮ್ರಾಗೆ ಸಿಕ್ಕಿದ್ದು 4 ಬಾಲ್​ ಮಾಡೋ ಅವಕಾಶ ಮಾತ್ರ. ಮೊದಲ ಓವರ್​​ನಲ್ಲಿ ಇಶಾಂತ್ ಶರ್ಮಾ 8ರನ್ ಬಿಟ್ಟುಕೊಟ್ಟರು. ಬುಮ್ರಾ 4 ಬಾಲ್​​ಗಳನ್ನು ಮಾಡಿ 1 ಬಿಟ್ಟುಕೊಟ್ಟರು. ಹೀಗೆ ಮೊದಲ ಇನ್ನಿಂಗ್ಸ್​ನಲ್ಲಿ ಬೂಮ್ರಾ ದುಬಾರಿಯಾಗಿದ್ದು, ವಿಕೆಟ್​​ ಪಡೆಯಲು ಸಾಧ್ಯವಾಗದೇ ಇದ್ದುದು ಕೂಡ ತಂಡದ ಮೇಲೆ ಪರಿಣಾಮ ಬೀರಿತು.

ಟೆಸ್ಟ್​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್​ಗೆ ಯಾಕಿಲ್ಲ ಅವಕಾಶ?

LEAVE A REPLY

Please enter your comment!
Please enter your name here

- Advertisment -

Most Popular

Recent Comments