Thursday, October 6, 2022
Powertv Logo
Homeವಿದೇಶವಿರಾಟ್ ಕೊಹ್ಲಿ - ರೋಹಿತ್ ಶರ್ಮಾ ನಡುವೆ ಬಿಗ್ ಫೈಟ್..!

ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ನಡುವೆ ಬಿಗ್ ಫೈಟ್..!

ಆಕ್ಲೆಂಡ್​ : ಅತಿಥೇಯ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಕದನ ಆರಂಭವಾಗಿದೆ. ಈಡನ್ ಪಾರ್ಕ್​ನಲ್ಲಿ ನಡೆಯುತ್ತಿರೋ ಫಸ್ಟ್ ಟಿ20ಯಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಪ್ರಸ್ತಕ ಟೂರ್ನಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಮರ ಮಾತ್ರವಲ್ಲ! ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಫೈಟ್​ಗೂ ವೇದಿಕೆ!
ಅರೆ, ನಮ್ಮವರೇಯಾದ ಕೊಹ್ಲಿ ಮತ್ತು ಶರ್ಮಾ ನಡುವೆ ಅದೆಂಥಾ ಫೈಟ್. ಇಬ್ಬರ ನಡುವೆ ಮನಸ್ತಾಪ ಯಾಕೆ ಅಂತೀರಾ? ಅದು ಆರೋಗ್ಯಕರ ಪೈಪೋಟಿ, ಪ್ರತಿಯೊಂದು ವೃತ್ತಿಯಲ್ಲೂ ಸಹೋದ್ಯೋಗಿಗಳ ನಡುವೆ ಇರ್ಬೇಕಾದ ಸ್ಪರ್ಧೆ.
ಹೌದು ಟಿ20 ಇಂಟರ್ ನ್ಯಾಷನಲ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಕೊಹ್ಲಿ ಮತ್ತು ಶರ್ಮಾ ನಡುವೆ ಫೈಟ್ ಇದೆ. ಕ್ಯಾಪ್ಟನ್ ಕೊಹ್ಲಿ 2,689ರನ್​ ಸಂಪಾದಿಸಿದ್ದರೆ, ರೋಹಿತ್ ಶರ್ಮಾ 2,633ರನ್ ಬಾರಿಸಿದ್ದಾರೆ. ಅಂದ್ರೆ ಕೊಹ್ಲಿಗಿಂತ ಶರ್ಮಾ ಕೇವಲ 56ರನ್​​ ಹಿನ್ನೆಡೆಯಲ್ಲಿದ್ದು, ಶತಾಯಗತಾಯ ಕೊಹ್ಲಿಗಿಂತ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿ ಮೊದಲ ಸ್ಥಾನ ಅಲಂಕರಿಸ್ಬೇಕು ಅಂತ ರೋಹಿತ್ ಕಾದಿದ್ದಾರೆ. ಕೊಹ್ಲಿ ಯಾವ್ದೇ ಕಾರಣಕ್ಕೂ ಸ್ಥಾನ ಬಿಟ್ಕೊಡಬಾರದು ಅಂತ ಉತ್ತಮ ಆಟ ಮುಂದುವರೆಸೋ ಛಲದಲ್ಲಿದ್ದಾರೆ. ಈ ಫೈಟ್​​ನಿಂದ ಟೀಮ್ ಇಂಡಿಯಾಕ್ಕೇ ಒಳಿತು ಬಿಡಿ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ – ಆಡುವ 11ರ ಬಳಗದಲ್ಲಿ ಯಾರಿದ್ದಾರೆ? ಯಾರಿಲ್ಲ?

‘ಕಿವಿ’ ಹಿಂಡಲು ಕೊಹ್ಲಿ ಪಡೆ ಸಜ್ಜು – ಗವಸ್ಕಾರ್, ಸಚಿನ್, ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ ರೋಹಿತ್ ಶರ್ಮಾ!

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments