ಆಕ್ಲೆಂಡ್ : ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ.
ಗ್ರೀನ್ಪಾರ್ಕ್ನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದ ಭಾರತ ಅತಿಥೇಯ ನ್ಯೂಜಿಲೆಂಡನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸತು. ಕಾಲಿನ್ ಮನ್ರೋ (59) ಮತ್ತು ಕ್ಯಾಪ್ಟನ್ ಕೇನ್ ವಿಲಿಯಮ್ಸನ್ (51) ಹಾಗೂ ರಾಸ್ ಟೇಲರ್ (ಅಜೇಯ 54) ಬಿರುಸಿನ ಆಟದ ನೆರವಿನಿಂದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳ್ಕೊಂಡು 203ರನ್ ಮಾಡಿತು.
ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಹಿಟ್ ಮ್ಯಾನ್ ರೋಹಿತ್ ಶರ್ಮಾ (7) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಜೊತೆಯಾದ ಕನ್ನಡಿಗ ರಾಹುಲ್ (56) ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ (45) 99ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಆದಾರವಾದ್ರು. ಕೇವಲ 6ರನ್ ಅಂತರದಲ್ಲಿ ರಾಹುಲ್ ಮತ್ತು ಕೊಹ್ಲಿ ಇಬ್ಬರೂ ಪೆವಿಲಿಯನ್ ಕಡೆ ಮುಖಮಾಡಿದಾಗ ವಿಜಯಲಕ್ಷ್ಮಿ ನ್ಯೂಜಿಲೆಂಡ್ ಕಡೆ ಒಲವು ತೋರಿದ್ದಳು. ಆದರೆ ಶ್ರೇಯಸ್ ಅಯ್ಯರ್ ಅದಕ್ಕೆ ಆಸ್ಪದ ಕೊಡಲಿಲ್ಲ. 29 ಬಾಲ್ಗಳಲ್ಲಿ 58ರನ್ ಬಾರಿಸಿ ಭರ್ಜರಿ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಶಿವಂದುಬೆ 13 ಹಾಗೂ ಕನ್ನಡಿಗ ಮನೀಷ್ ಪಾಂಡೆ ಅಜೇಯ 14ರನ್ ಕೊಡುಗೆ ನೀಡಿದ್ರು.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾಮ, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಶಿವಂದುಬೆ , ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ನಡುವೆ ಬಿಗ್ ಫೈಟ್..!
‘ಕಿವಿ’ ಹಿಂಡಲು ಕೊಹ್ಲಿ ಪಡೆ ಸಜ್ಜು – ಗವಸ್ಕಾರ್, ಸಚಿನ್, ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ ರೋಹಿತ್ ಶರ್ಮಾ!
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ – ಆಡುವ 11ರ ಬಳಗದಲ್ಲಿ ಯಾರಿದ್ದಾರೆ? ಯಾರಿಲ್ಲ?