ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ನಲ್ಲಿ ಭಾರತಕ್ಕೆ ವಿರಾಟ ವಿಜಯ..!

0
259

ಕೊಲ್ಕತ್ತಾ :  ಚೊಚ್ಚಲ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 46 ರನ್​ಗಳ ಭರ್ಜರಿ ಜಯ ದಾಖಲಿಸಿದೆ.

ಈಡನ್​ ಗಾರ್ಡನ್​ನಲ್ಲಿ ನಡೆದ ಮ್ಯಾಚಲ್ಲಿ ಮೂರನೇ ದಿನದಾಟಕ್ಕೇ ಬಾಂಗ್ಲಾ ಭಾರತದ ಎದುರು ಮಂಡಿಯೂರಿತು. ಈ ಗೆಲುವಿನೊಂದಿಗೆ ಭಾರತ 2-0 ಅಂತರದಲ್ಲಿ ಇನ್ನೂ ಒಂದು ಮ್ಯಾಚ್ ಬಾಕಿ ಇರುವಂತೆಯೇ  ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಬಾಂಗ್ಲಾದೇಶ  ಮೊದಲ ದಿನದಲ್ಲೇ ಕೇವಲ 106ಕ್ಕೆ ಆಲೌಟಾಯಿತು ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ಕ್ಯಾಪ್ಟನ್ ಕೊಹ್ಲಿ ಆಕರ್ಷಕ ಸೆಂಚುರಿ (136) ನೆರವಿನಿಂದ 9 ವಿಕೆಟ್​ ನಷ್ಟಕ್ಕೆ 347ರನ್​​ಗಳನ್ನು ಮಾಡಿ ಇನ್ನಿಂಗ್ಸ್ ಡಿಕ್ಲೆರ್ ಮಾಡಿಕೊಂಡಿತು.  241ರನ್​ಗಳ ಬೆನ್ನತ್ತಿದ ಬಾಂಗ್ಲಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲೂ ಮುಗ್ಗರಿಸಿ 195ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತದ ಸಂಘಟಿತ ಆಟಕ್ಕೆ ತಲೆಬಾಗಿತು.

ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಕಿತ್ತಿದ್ದ ಇಶಾಂತ್ ಶರ್ಮಾ 2ನೇ ಇನ್ನಿಂಗ್ಸ್​ ನಲ್ಲಿ 4 ವಿಕೆಟ್ ಕಿತ್ತರು. ಅಂತೆಯೇ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದಿದ್ದ ಉಮೇಶ್ ಯಾದವ್ , ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 

 

LEAVE A REPLY

Please enter your comment!
Please enter your name here