ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭಾರತದ ಎದುರು ಬಾಂಗ್ಲಾ ಪೀಕಲಾಟ..!

0
250

ಕೋಲ್ಕತ್ತಾ : ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಇಂದಿನಿಂದ ಆರಂಭವಾಗಿರುವ ಡೇ-ನೈಟ್ ಟೆಸ್ಟ್ ಮ್ಯಾಚಲ್ಲಿ ಭಾರತದ ವಿರುದ್ಧ ಬಾಂಗ್ಲಾ ನಲುಗುತ್ತಿದೆ. ಮೊದಲ ಪಿಂಕ್ ಬಾಲ್ ಟೆಸ್ಟಲ್ಲಿ ಭಾರತದ ದಾಳಿಯನ್ನು ಎದುರಿಸಲು ಬಾಂಗ್ಲಾ ಬೌಲರ್ ಗಳು ಪೀಕಲಾಡುತ್ತಿದ್ದಾರೆ.‌

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 60 ರನ್​ಗಳಿಗೆ 6 ವಿಕೆಟ್ ಕಳ್ಕೊಂಡು ಸಂಕಷ್ಟಕ್ಕೆ ಸಿಲುಕಿದೆ. ವೇಗಿ ಉಮೇಶ್ ಯಾದವ್ 3 , ಇಶಾಂತ್ ಶರ್ಮಾ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಕಿತ್ತು ಬಾಂಗ್ಲಾ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ.

ಲಂಚ್ ಬ್ರೇಕ್ ಗೆ ಮುನ್ನ 6 ವಿಕೆಟ್ ಕಳೆದುಕೊಂಡು 73 ರನ್ ಮಾಡಿದ್ದ ಬಾಂಗ್ಲಾ ಮೊದಲ ದಿನ ಎರಡನೇ ಸೆಷೆನ್ ಬ್ಯಾಟಿಂಗ್ ನಡೆಸುತ್ತಿದ್ದು, ಉಳಿದ ನಾಲ್ಕು ವಿಕೆಟ್ ಕಿತ್ತು..ಇಂದೇ ಮೊದಲ ಇನ್ನಿಂಗ್ಸ್ ಆಡುವ ಉತ್ಸಾಹದಲ್ಲಿದೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ.

LEAVE A REPLY

Please enter your comment!
Please enter your name here