ಪಿಂಕ್ ಬಾಲ್ ಟೆಸ್ಟ್ : ಕಣ್ಮುಚ್ಚಿ ಬಿಡೋದ್ರಲ್ಲಿ ಫಸ್ಟ್ ಇನ್ನಿಂಗ್ಸ್ ಮುಗಿಸಿದ ಬಾಂಗ್ಲಾ!

0
523

ಕೋಲ್ಕತ್ತಾ : ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್​ನಲ್ಲಿ ನಡೆಯುತ್ತಿರೋ ಮೊದಲ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಪ್ರವಾಸಿ ಬಾಂಗ್ಲಾ ಕಣ್ಮುಚ್ಚಿ ಬಿಡೋದ್ರಲ್ಲಿ ಆಲ್​ಔಟ್ ಆಗಿದೆ. ಮೊದಲ ದಿನದ ಆಟ ಮುಗಿಯುವ ಮುನ್ನವೇ ಬಾಂಗ್ಲಾ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್ ಸೇರಿದ್ದು, ಭಾರತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದೆ.
ಇಂಶಾಂತ್ ಶರ್ಮಾ (5 ವಿಕೆಟ್), ಉಮೇಶ್ ಜಾದವ್​ (3 ವಿಕೆಟ್) ಮತ್ತು ಮೊಹಮ್ಮದ್ ಶಮಿ ( 2 ವಿಕೆಟ್) ಬಾಂಗ್ಲಾ ಬ್ಯಾಟ್ಸ್​​ಮನ್​ಗಳನ್ನು ನೆಲಕಚ್ಚಿ ಆಡಲು ಬಿಡದೆ ಪೆವಿಲಿಯನ್ ಪೆರೇಡ್ ಮಾಡಿಸಿದ್ರು. ಇದರೊಂದಿಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 30.3 ಓವರ್ ಬ್ಯಾಟಿಂಗ್ ಮಾಡಿ 106ರನ್​ಗಳಿಗೆ ಆಲ್​​ಔಟ್​ ಆಗಿದೆ.

LEAVE A REPLY

Please enter your comment!
Please enter your name here