ಕನ್ನಡಿಗ ಮಯಾಂಕ್ ಅಗರ್​​ವಾಲ್ 3ನೇ ಟೆಸ್ಟ್ ಶತಕ!

0
442

ಟೀಮ್ ಇಂಡಿಯಾದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅಗರ್​ವಾಲ್​ ತಮ್ಮ ಟೆಸ್ಟ್ ಕರಿಯರ್​ನ 12ನೇ ಇನ್ನಿಂಗ್ಸ್​​ನಲ್ಲಿ 3ನೇ ಟೆಸ್ಟ್ ಶತಕ ಸಿಡಿಸಿದ್ದಾರೆ.
ಇಂದೋರ್​ನಲ್ಲಿ ನಡೆಯುತ್ತಿರೋ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಮ್ಯಾಚಲ್ಲಿ ಅಗರ್​ವಾಲ್ ಶತಕಗಳಿಸಿ ಮಿಂಚಿದ್ದಾರೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​​ನಲ್ಲಿ 150ರನ್​ಗಳಿಗೆ ಆಲ್​ಔಟ್ ಆಯ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಆರಂಭಿಕ ಅಗರ್​ವಾಲ್ ಆಸರೆಯಾಗಿ ನಿಂತಿದ್ದಾರೆ. ಸದ್ಯ ಅವರಿಗೆ ಅಜಿಂಕ್ಯ ರಹಾನೆ ಕನ್ನಡಿಗನಿಗೆ ಸಾಥ್ ನೀಡಿ, ಅರ್ಧಶತಕದೊಂದಿಗೆ ಆಟ ಮುಂದುವರೆಸಿದ್ದಾರೆ.
ಭಾರತ 3 ವಿಕೆಟ್​ ನಷ್ಟಕ್ಕೆ 259ರನ್​ಗಳನ್ನು ಮಾಡಿದೆ. ಬ್ಯಾಟಿಂಗ್ ನಡೆಸುತ್ತಿರುವ ಅಗರ್​ ವಾಲ್ (ಅ 134), ರಹಾನೆ ( ಅ 61) ಬಿಟ್ಟರೆ ಚೇತೇಶ್ವರ ಪೂಜಾರ 54ರನ್ ಕೊಡುಗೆ ನೀಡಿದ್ದರು.

LEAVE A REPLY

Please enter your comment!
Please enter your name here