ಭಾರತ- ಬಾಂಗ್ಲಾ ಟೆಸ್ಟ್​ : ಟಾಸ್​ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ

0
164

ಇಂದೋರ್ : ಬಾಂಗ್ಲಾ ವಿರುದ್ಧ ಟಿ20 ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದಿನಿಂದ ಬಾಂಗ್ಲಾ ಹುಲಿಗಳ ಎದುರು ಟೆಸ್ಟ್ ಅಖಾಡಕ್ಕೆ ಧುಮುಕುತ್ತಿದೆ. ಮೂರು ಮ್ಯಾಚುಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇಂದೋರ್​ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ.
ಟಾಸ್ ಗೆದ್ದ ಬಾಂಗ್ಲಾ ನಾಯಕ ಮೊಮಿನ್ ಉಲ್ ಹಕ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ 240 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ ಬಾಂಗ್ಲಾ ವಿರುದ್ಧವೂ ಪಾರುಪತ್ಯ ಸ್ಥಾಪಿಸುವ ಉತ್ಸಾಹದಲ್ಲಿದೆ. ತಂಡಗಳ ಬಲಾಬಲ ನೋಡಿದ್ರೆ ಭಾರತ ಪ್ರಬಲ ಅನ್ನೋದ್ರಲ್ಲಿ ಡೌಟಿಲ್ಲ. ಆದ್ರೆ, ಬಾಂಗ್ಲಾ ಹುಲಿಗಳು ಯಾವ ಟೈಮಲ್ಲಿ ಬೇಕಾದ್ರು ಶಾಕ್ ನೀಡಬಲ್ಲವರಾಗಿದ್ದಾರೆ.
ತಂಡಗಳು ಇಂತಿವೆ :
ಭಾರತ : ಮಯಾಂಕ್​ ಅಗರ್​ವಾಲ್, ರೋಹಿತ್​ ಶರ್ಮಾ, ಚೆತೇಶ್ವರ ಪೂಜಾರ, ವಿರಾಟ್​ ಕೋಹ್ಲಿ (ನಾಯಕ), ಅಜಿಂಕ್ಯ ರಹಾನೆ , ರವಿಂದ್ರ ಜಡೇಜ ವೃದ್ದಿಮಾನ್ ಸಹಾ (ವಿಕೇಟ್​ ಕೀಪರ್​), ರವಿಚಂದ್ರನ್​ ಅಶ್ವಿನ್​, ಉಮೇಶ್ ಯಾದವ್​, ಮಹಮ್ಮದ್ ಶಮಿ, ಇಶಾಂತ್​ ಶರ್ಮ.
ಬಾಂಗ್ಲಾ : ಇಮ್ರುಲ್​ ಕಯೇಸ್​, ಶಾದ್ಮನ್​ ಇಸ್ಲಾಮ್​ , ಮಹಮ್ಮದ್ ಮಿಥುನ್​, ಮೋಮಿನ್ ಉಲ್ ಹಕ್ (ನಾಯಕ), ಮುಶ್ಫಿಕರ್​ ರಹೀಂ, ಮಹಮದುಲ್ಲಾ, ಲಿಂಟನ್​ ದಾಸ್​ (ವಿಕೇಟ್ ಕೀಪರ್​), ಮೆಹ್ದಿ ಹಸನ್​, ತೈಜುಲ್​ ಇಸ್ಲಾಂ, ಅಬು ಜಾಯೇದ್. ಇಬಾದಾತ್​ ಹುಸೈನ್​

LEAVE A REPLY

Please enter your comment!
Please enter your name here