Home ಕ್ರೀಡೆ P.Cricket ಮೂರೇ ದಿನಕ್ಕೆ ಟೀಮ್ ಇಂಡಿಯಾ ಎದುರು ಮಂಡಿಯೂರಿದ ಬಾಂಗ್ಲಾ!

ಮೂರೇ ದಿನಕ್ಕೆ ಟೀಮ್ ಇಂಡಿಯಾ ಎದುರು ಮಂಡಿಯೂರಿದ ಬಾಂಗ್ಲಾ!

ಇಂದೋರ್ : ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಪ್ರವಾಸಿ ಬಾಂಗ್ಲಾ ದೇಶದ ವಿರುದ್ಧ ಮೊದಲ ಟೆಸ್ಟ್​​ ಮ್ಯಾಚಲ್ಲಿ ಇನ್ನಿಂಗ್ಸ್ ಮತ್ತು 130 ರನ್​ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ 3ನೇ ದಿನದ ಆಟದಲ್ಲೇ ಭಾರತ ಬಾಂಗ್ಲಾ ಹುಲಿಗಳನ್ನು ಮಣಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ ಭಾರತದ ಸಂಘಟಿತ ದಾಳಿಯಿಂದ 150ರನ್ ಗಳಿಗೆ ಸರ್ವಪತನ ಕಂಡಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆಡಿದ ಭಾರತ ಕನ್ನಡಿಗ ಮಯಾಂಕ್ ಅಗರ್​ ವಾಲ್ ಡಬಲ್ ಸೆಂಚುರಿ (243), ಅಜಿಂಕ್ಯಾ ರಹಾನೆ (86), ರವೀಂದ್ರ ಜಡೇಜಾ (60), ಚೇತೇಶ್ವರ ಪೂಜಾರ (54)ರನ್​ಗಳ ನೆರವಿನಿಂದ 6 ವಿಕೆಟ್​ಗೆ 493ರನ್​ ಮಾಡಿ 343ರನ್​ಗಳ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ನಂತರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಮೊಹಮ್ಮದ್ ಶಮಿ (4 ವಿಕೆಟ್), ರವಿಚಂದ್ರನ್ ಅಶ್ವಿನ್ (3 ವಿಕೆಟ್), ಉಮೇಶ್ ಜಾದವ್ (2 ವಿಕೆಟ್) ಮತ್ತು ಇಶಾಂತ್ ಶರ್ಮಾ (1 ವಿಕೆಟ್) ದಾಳಿಗೆ ತತ್ತರಿಸಿ 213ರನ್​ಗಳಿಗೆ ಆಲ್​ಔಟ್ ಆಗುವುದರೊಂದಿಗೆ ಇನ್ನಿಂಗ್ಸ್ ಮತ್ತು 130ರನ್​ಗಳಿಂದ ಸೋಲುಂಡಿತು.
ಬಾಂಗ್ಲಾ ಮುಷ್ಫಿಕುರ್ ರಹೀಮ್ ಎರಡು ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 43, 64 ರನ್ ಮಾಡಿದ್ದು ಬಿಟ್ಟರೆ ಬೇರಾರು ಹೋರಾಟದ ಇನ್ನಿಂಗ್ಸ್ ಕಟ್ಟಲಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments