Tuesday, September 27, 2022
Powertv Logo
Homeವಿದೇಶಚೊಚ್ಚಲ ವರ್ಲ್ಡ್​ಕಪ್​​​ ಗೆಲ್ಲಲು ಭಾರತ ವನಿತೆಯರು ರೆಡಿ

ಚೊಚ್ಚಲ ವರ್ಲ್ಡ್​ಕಪ್​​​ ಗೆಲ್ಲಲು ಭಾರತ ವನಿತೆಯರು ರೆಡಿ

ಮೆಲ್ಬೋರ್ನ್ : ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್​ ಎತ್ತಿಹಿಡಿಯಲು ಹರ್ಮನ್ ಪ್ರೀತ್​ ಕೌರ್ ನೇತೃತ್ವದ ಟೀಮ್ ಇಂಡಿಯಾ ಸನ್ನದ್ಧವಾಗಿದೆ.
ಮೆಲ್ಬೋರ್ನ್​​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಆಸೀಸನ್ನು ಸೋಲಿಸುವ ಉತ್ಸಾಹದಲ್ಲಿ ಭಾರತದ ವನಿತೆಯರಿದ್ದಾರೆ. ಮೊದಲ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 17ರನ್​ಗಳಿಂದ ಭಾರತ ಗೆದ್ದಿತ್ತು. ಆ ಬಳಿಕ ಬಾಂಗ್ಲಾ ವಿರುದ್ಧ 18, ನ್ಯೂಜಿಲೆಂಡ್ ವಿರುದ್ಧ 3, ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳಿಂದ ಗೆದ್ದ ಭಾರತ ಅಜೇಯ ಓಟದೊಂದಿಗೆ ಫೈನಲ್ ಪ್ರವೇಶ ಪಡೆದಿದೆ. ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್​ ಮಳೆಯಿಂದಾಗಿ ರದ್ದಾಗಿದ್ದರಿಂದ ಲೀಗ್ ಪಂದ್ಯಾವಳಿಗಳ ಅಂಕಪಟ್ಟಿಯಲ್ಲಿನ ಪಾಯಿಂಟ್ ಅನ್ವಯ ಫೈನಲ್​ಗೆ ಲಗ್ಗೆ ಇಟ್ಟಿದೆ. ಅತ್ತ ಆಸೀಸ್ ಲೀಗ್​ನಲ್ಲಿ ಭಾರತ ವಿರುದ್ಧ ಸೋತಿದ್ದು ಬಿಟ್ಟರೆ, ಶ್ರೀಲಂಕಾ ವಿರುದ್ಧ 5 ವಿಕೆಟ್, ಬಾಂಗ್ಲಾ ವಿರುದ್ಧ 86ರನ್​​ ಮತ್ತು ನ್ಯೂಜಿಲೆಂಡ್ ವಿರುದ್ಧ 4ರನ್​​ ಗೆಲುವು ಹಾಗೂ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5ರನ್ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಹೀಗೆ ಎರಡೂ ತಂಡಗಳು ಬಲಾಢ್ಯವಾಗಿದ್ದು, ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ಕ್ಕೆ ಪಂದ್ಯ ಆರಂಭವಾಗಲಿದೆ.

ತಂಡಗಳು

ಭಾರತ : ಶೆಫಾಲಿ ವರ್ಮ, ಸ್ಮೃತಿ ಮಂಧಾನ, ಜೆಮಿಮಾ ರೋಡಿಗ್ರಸ್, ಹರ್ಮನ್ ಪ್ರೀತಿ ಕೌರ್ (ನಾಯಕಿ), ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ತಾನಿಯಾ ಭಾಟಿಯಾ, ಶಿಖಾ ಪಾಂಡೆ, ರಾಧಾ ಯಾದವ್, ಪೂನಂ ಪಾಂಡೆ, ರಾಜೇಶ್ವರಿ ಗಾಯಕ್ವಾಡ್

 

ಆಸ್ಟ್ರೇಲಿಯಾ : ಬೆತ್ ಮೂನಿ, ಎಲಿಸಾ ಹೀಲಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೇ ಗಾರ್ಡ್ನರ್, ರಾಚೆಲ್ ಹೇನ್ಸ್, ಜೆಸ್​ ಜೊನಾಸೆನ್, ನಿಕೋಲಾ ಕ್ಯೇರಿ, ಡೆಲಿಸಾ ಕಿಮೆನ್ಸ್, ಮೊಲಿ ಸ್ತ್ರಾನೊ, ಸೋಫಿ ಮೊಲಿನ್ಯುಕ್ಸ್, ಮೇಗನ್ ಶೂಟ್

LEAVE A REPLY

Please enter your comment!
Please enter your name here

- Advertisment -

Most Popular

Recent Comments