Saturday, May 21, 2022
Powertv Logo
Homeವಿದೇಶನಾಳಿನ ಪಂದ್ಯದಿಂದ ಪಂತ್ ಹೊರಕ್ಕೆ - ಕನ್ನಡಿಗನ ಹೆಗಲಿಗೆ ಹೆಚ್ಚಿನ ಹೊಣೆ!

ನಾಳಿನ ಪಂದ್ಯದಿಂದ ಪಂತ್ ಹೊರಕ್ಕೆ – ಕನ್ನಡಿಗನ ಹೆಗಲಿಗೆ ಹೆಚ್ಚಿನ ಹೊಣೆ!

ರಾಜ್​ಕೋಟ್​ : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಒಡಿಐನಿಂದ ವಿಕೆಟ್ ಕೀಪರ್ ರಿಷಭ್ ಪಂತ್ ಹೊರಗುಳಿಯಲಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್​ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಜವಬ್ದಾರಿ ಹೊರ ಬೇಕಾಗಿದೆ. 
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್​ಗೆ ಬಾಲ್ ಬಡಿದು ಪಂತ್​ ಗಾಯಗೊಂಡಿದ್ದರು. ಬಳಿಕ ಅವರು ವಿಕೆಟ್​ ಕೀಪಿಂಗ್​ ಮಾಡಿರಲಿಲ್ಲ. ರಾಹುಲ್ ಕೀಪಿಂಗ್ ನಿಭಾಯಿಸಿದ್ದರು.
ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಾಳೆ ನಡೆಯಲಿರುವ ಎರಡನೇ ಪಂದ್ಯದಲ್ಲಿ ಪಂತ್ ಆಡುತ್ತಿಲ್ಲ. ಗಾಯ ಸುಧಾರಿಸದ ಹಿನ್ನೆಲೆಯಲ್ಲಿ ಪಂತ್ ಪರೀಕ್ಷೆಗಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅತ್ತ ಟೀಮ್ ಇಂಡಿಯಾ ರಾಜ್​ಕೋಟ್ ತಲುಪಿದೆ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments