Thursday, October 6, 2022
Powertv Logo
Homeವಿದೇಶ78 ರನ್​​ ಮಾಡಿದ್ರೂ ಕೊಹ್ಲಿಯದ್ದು ನಿನ್ನೆ ಕೆಟ್ಟ ರೆಕಾರ್ಡ್..!

78 ರನ್​​ ಮಾಡಿದ್ರೂ ಕೊಹ್ಲಿಯದ್ದು ನಿನ್ನೆ ಕೆಟ್ಟ ರೆಕಾರ್ಡ್..!

ರಾಜ್​ಕೋಟ್​ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ರೆಕಾರ್ಡ್​ಗಳ ಕಿಂಗ್! ಒಂದಾದ ಮೇಲೊಂದು ದಾಖಲೆಯನ್ನು ನಿರ್ಮಿಸುತ್ತಲೇ ಇರುತ್ತಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರೋ ಏಕದಿನ ಸರಣಿಯಲ್ಲಿ ಸತತ ಎರಡು ಮ್ಯಾಚ್​ಗಳಲ್ಲಿ ಎರಡು ಕೆಟ್ಟ ದಾಖಲೆಗಳನ್ನು ಬರೆದಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಫಸ್ಟ್ ಒಡಿಐನಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲನುಭವಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಇತಿಹಾಸದಲ್ಲಿ ಎಂದೂ ಕೂಡ ಭಾರತ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಸೋಲು ಕಂಡಿರಲಿಲ್ಲ. ಆದರೆ ವಿರಾಟ್​ ಆಸೀಸ್ ವಿರುದ್ಧ ಇಂಥಾ ಹೀನಾಯ ಸೋಲು ಕಂಡ ಭಾರತದ ಮೊದಲ ನಾಯಕ ಎಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ರು. ರಾಜ್​ಕೋಟ್​ನಲ್ಲಿ ನಡೆದ ಎರಡನೇ ಮ್ಯಾಚ್​ನಲ್ಲೂ ಕೊಹ್ಲಿ ಒಲ್ಲದ ರೆಕಾರ್ಡ್​ ಬರೆದಿದ್ದಾರೆ. 
ಹೌದು, 78ರನ್ ನೀಡಿ ಭಾರತ ಉತ್ತಮ ಮೊತ್ತ ಪೇರಿಸಲು ಪ್ರಮುಖಪಾತ್ರವಹಿಸಿದ್ರು. ಆದರೆ ಸ್ಪಿನ್ನರ್ ಆ್ಯಡಂ ಜಂಪಾಗೆ ವಿಕೆಟ್ ಒಪ್ಪಿಸಿದ್ರು. ಮೊದಲ ಮ್ಯಾಚ್​ನಲ್ಲೂ ಕೊಹ್ಲಿ ಜಂಪಾ ಬೌಲಿಂಗ್​ನಲ್ಲಿ ಔಟ್ ಆಗಿದ್ದಾರೆ. ಒಡಿಐನಲ್ಲಿ ಇದುವರೆಗೆ 5 ಬಾರಿ ಕೊಹ್ಲಿ ಜಂಪಾಗೆ ಔಟಾಗಿದ್ದಾರೆ. ಟೀಮ್ ಇಂಡಿಯಾದ ಕ್ಯಾಪ್ಟನ್​ ಕೊಹ್ಲಿಯನ್ನು ಅತೀ ಹೆಚ್ಚು ಬಾರಿಯ ಔಟ್ ಮಾಡಿದ ಎರಡನೇ ಬೌಲರ್ ಆಗಿದ್ದಾರೆ. ವೆಸ್ಟ್ ಇಂಡೀಸ್​ನ ರವಿ ರಾಮ್​ಪಾಲ್ 6 ಬಾರಿ ಕೊಹ್ಲಿಗೆ ಪೆವಿಲಿಯನ್ ತೋರಿಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments