Home ಕ್ರೀಡೆ P.Cricket ಇಂಡೋ-ಆಸೀಸ್​​ 5ನೇ ಒಡಿಐ : ಗೆದ್ದವರ ಪಾಲಿಗೆ ಸರಣಿ

ಇಂಡೋ-ಆಸೀಸ್​​ 5ನೇ ಒಡಿಐ : ಗೆದ್ದವರ ಪಾಲಿಗೆ ಸರಣಿ

ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಏಕದಿನ ಪಂದ್ಯ ಇಂದು ದೆಹಲಿಯಲ್ಲಿ ನಡೆಯಲಿದ್ದು, ಫಿರೋಜ್​ ಷಾ ಕೊಟ್ಲಾ ಮೈದಾನ ವೇದಿಕೆಯಾಗಲಿದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳೂ ತಲಾ 2-2 ಅಂತರದಲ್ಲಿ ಸಮಬಲ ಸಾಧಿಸಿರುವುದರಿಂದ ಪಂದ್ಯ ಕುತೂಹಲ ಮೂಡಿಸಿದ್ದು, ಇಂದಿನ ಪಂದ್ಯದ ಗೆಲುವು ಸರಣಿ ನಿರ್ಧರಿಸಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದು, ಇಂದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ಲೂ ಬಾಯ್ಸ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ಯಾವ ತಂಡವನ್ನು ಕಡೆಗಣೆಸುವಂತಿಲ್ಲ. 4ನೇ ಏಕದಿನ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನತ್ತಿ ಗೆದ್ದ ಆಸ್ಟ್ರೇಲಿಯಾ, ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಇದೀಗ 5 ಏಕದಿನ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 2 ಪಂದ್ಯ ಗೆದ್ದಿರುವುದರಿಂದ, ಕೊನೆಯ ಪಂದ್ಯ ರೋಚಕತೆ ಹುಟ್ಟಿಸಿದೆ.
ಫಾರ್ಮ್​ ಕಳೆದುಕೊಂಡಿದ್ದ ಆರಂಭಿಕ ಬ್ಯಾಟ್ಸ್​​ಮನ್​ಗಳು ಕೊನೆಯ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿರುವುದು ಟೀಮ್​ಇಂಡಿಯಾ ಪಾಳಯದಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದ ಅಂಚಿನಲ್ಲಿ ಎಡವಿದರೆ, ಧವನ್ 17 ಇನ್ನಿಂಗ್ಸ್ ಬಳಿಕ ಮೂರಂಕಿ ಮೊತ್ತ ಮುಟ್ಟಿದರು. ಹೀಗಾಗಿ ಈ ಆಟಗಾರರ ಮೇಲೆ ಭರವಸೆ ಮೂಡಿದೆ. ಇನ್ನು ಮಿಡಲ್​ ಆರ್ಡರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್, ಅಂಬಟಿ ರಾಯುಡು ತಂಡದ ಬಲವಾಗಿದ್ದಾರೆ. ಜೊತೆಗೆ ತವರಿನಲ್ಲಿ ಯುವ ವಿಕೆಟ್ ಕೀಪರ್ ರಿಷಬ್​​​ ಪಂತ್​ ಮಿಂಚಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇದೆಲ್ಲದರೊಂದಿಗೆ ಆಲ್​ರೌಂಡರ್​ಗಳು ಸಾಮರ್ಥ್ಯಕ್ಕೆ ತಕ್ಕವಾಡಬೇಕಿದೆ.

ಆದರೆ 4ನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ನ ಹೊರತಾಗಿಯೂ ತಂಡವನ್ನು ಕಾಡಿದ್ದು, ಬೌಲಿಂಗ್​ ವೈಫಲ್ಯ. ಮೊಹಾಲಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ರನ್​ ನೀಡಿದ ​ಟೀಮ್​ಇಂಡಿಯಾ ಬೌಲರ್​ಗಳು ಸೋಲಿಗೆ ಕಾರಣರಾದ್ರು. ಹೀಗಾಗಿ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರಿತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಮ್ಮ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಬೇಕಿದೆ. ಸ್ಪಿನ್ ಜುಗಲ್ ಬಂದಿ ಯಜುವೇಂದ್ರ ಚಹಾಲ್ ಹಾಗೂ ಕುಲ್ ದೀಪ್ ಯಾದವ್ ಕೂಡ ಮೋಡಿ ಮಾಡಬೇಕಿದೆ.
ಇನ್ನು ಕಾಂಗರೂ ಬಳಗದಲ್ಲಿ ಆಟಗಾರರು ಲಯಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ತಂದಿದೆ. ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜ, ಶಾನ್ ಮಾರ್ಶ್, ಪೀಟರ್ ಹ್ಯಾಂಡ್ಸ್ ಸ್ಕಂಬ್, ಗ್ಲೇನ್ ಮ್ಯಾಕ್ಸ್​​ವೆಲ್ ತಂಡದ ಬ್ಯಾಟಿಂಗ್​ ಶಕ್ತಿಯಾಗಿದ್ರೆ, ಪ್ಯಾಟ್ ಕಮಿನ್ಸ್ ಹಾಗೂ ಜಾಯ್ ರಿಚರ್ಡಸನ್, ಆ್ಯಡಂಜಂಪಾ ಟೀಮ್ ಇಂಡಿಯಾ ಬ್ಯಾಟ್ಸ್​​​ಮನ್​​​​​ಗಳನ್ನ ಕಾಡಬಲ್ಲರು. ಹೀಗಾಗಿ ಇಂದಿನ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿರುವ ಕೊಹ್ಲಿ ಪಡೆ ಗೆಲುವಿನ ಹಳಿಗೆ ಮರಳುತ್ತಾ? ವಿಶ್ವಕಪ್​ಗೂ ಮುನ್ನ ಸರಣಿ ಗೆಲುವಿನ ಸಿಹಿ ಅನುಭವಿಸುತ್ತದಾ? ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ದುಡ್ಡು  ಕೊಟ್ರೆ ಮಾತ್ರ ವಾರ್ಡ್​ ಬಾಯ್​​​ಗಳ ಕೆಲಸ..!

ಬೆಂಗಳೂರು : ದುಡ್ಡು ದುಡ್ಡು ದುಡ್ಡು ..  ಇಲ್ಲಿ ವಾರ್ಡ್​ ಬಾಯ್​ಗಳು ನೆಟ್ಟಗೆ ಕೆಲಸ ಮಾಡ್ಬೇಕು ಅಂದ್ರೆ ದುಡ್ಡು ಬಿಚ್ಚಲೇ ಬೇಕು! ಅಲ್ಪಸ್ವಲ್ಪ ದುಡ್ಡು ಕೊಟ್ರೆ ಧಿಮಾಕಿಂದ, ಸೊಕ್ಕಿನಿಂದ ಕೆಲಸ ಮಾಡ್ತಾರೆ! ಸ್ವಲ್ಪ...

ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಢ | 8 ಮಂದಿ ಸಜೀವ ದಹನ

ಅಹಮದಾಬಾದ್ : ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಢ ಸಂಭಂವಿಸಿದ್ದು, 8  ಮಂದಿ ರೋಗಿಗಳು ಸಜೀವ ದಹನಗೊಂಡಿದ್ದಾರೆ ವರದಿಯಾಗಿದೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿನ ಇಂಟೆನ್ಸಿವ್ ಕೇರ್ ಯುನಿಟ್ ( ಐಸಿಯು)...

ಬನ್ನೇರುಘಟ್ಟದಲ್ಲಿ ಸಫಾರಿ ಹುಲಿಯೊಂದಿಗೆ ಕಾಡಿನ ಹುಲಿ ಕಾದಾಟ..!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹುಲಿ ಮತ್ತು ಕಾಡಿನ ಹುಲಿ ಕಾದಾಡಿಕೊಂಡಿವೆ. ಸಫಾರಿ ಹುಲಿ ಮತ್ತು ಕಾಡಿನ ಹುಲಿ ಮುಖಾಮುಖಿಯಾಗಿದ್ದು, ಕಾದಾಟಕ್ಕಿಳಿದಿವೆ.  ಅವೆರಡರ ನಡುವೆ ತಂತಿ ಬೇಲಿ ಇದ್ದರೂ ಘರ್ಜಿಸುತ್ತಾ ಜಗಳಕ್ಕಿಳಿದಿವೆ. ಹುಲಿಗಳ ಈ ಕಾದಾಟದ...

ಮಲೆನಾಡಿನಲ್ಲಿ ವರ್ಷಧಾರೆ ವೈಭವ ; ಕಣ್ಮನ ಸೆಳೆಯುತ್ತಿದೆ ಜೋಗ ಜಲಪಾತ

 ಶಿವಮೊಗ್ಗ : ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಆಶ್ಲೇಷ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜಗದ್ವಿಖ್ಯಾತ ಜೋಗ ಜಲಪಾತ, ಮೈದುಂಬುತ್ತಿದ್ದು, ಮಂಜು ಮುಸುಕಿನ ಚೆಲ್ಲಾಟದ...

Recent Comments